ಆದಿಕಾಂಡ 15:7

ಆತನು ಅವನಿಗೆ--ಈ ದೇಶವನ್ನು ಬಾಧ್ಯವಾಗಿ ನಿನಗೆ ಕೊಡುವದಕ್ಕೆ ಕಲ್ದೀಯರ ಊರ್‌ನಿಂದ ನಿನ್ನನ್ನು ಹೊರಗೆ ತಂದ ಕರ್ತನು ನಾನೇ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 15

5ಕರ್ತನು ಅವನನ್ನು ಹೊರಗೆ ಕರಕೊಂಡು ಬಂದು--ಈಗ ನೀನು ಆಕಾಶವನ್ನು ದೃಷ್ಟಿಸಿ ನಕ್ಷತ್ರ ಗಳನ್ನು ಲೆಕ್ಕಿಸಶಕ್ತನಾದರೆ ಅವುಗಳನ್ನು ಲೆಕ್ಕಿಸು ಅಂದನು. ಆತನು ಅವನಿಗೆ--ಅದರಂತೆಯೇ ನಿನ್ನ ಸಂತತಿಯು ಆಗುವದು ಎಂದು ಅವನಿಗೆ ಹೇಳಿದನು.

6ಅಬ್ರಾ ಮನು ಕರ್ತನಲ್ಲಿ ನಂಬಿಕೆಯಿಟ್ಟನು. ಆತನು ಅದನ್ನು ಅವನಿಗೆ ನೀತಿ ಎಂದು ಎಣಿಸಿದನು.

7ಆತನು ಅವನಿಗೆ--ಈ ದೇಶವನ್ನು ಬಾಧ್ಯವಾಗಿ ನಿನಗೆ ಕೊಡುವದಕ್ಕೆ ಕಲ್ದೀಯರ ಊರ್‌ನಿಂದ ನಿನ್ನನ್ನು ಹೊರಗೆ ತಂದ ಕರ್ತನು ನಾನೇ ಎಂದು ಹೇಳಿದನು.

8ಅದಕ್ಕೆ ಅವನು--ದೇವರಾದ ಕರ್ತನೇ, ನಾನು ಅದನ್ನು ಬಾಧ್ಯವಾಗಿ ಹೊಂದುವೆನೆಂದು ಯಾವದ ರಿಂದ ತಿಳುಕೊಳ್ಳಲಿ ಅಂದನು.

9ಅದಕ್ಕೆ ಆತನು ಅಬ್ರಾಮನಿಗೆ--ಮೂರು ಮೂರು ವರುಷದ ಕಡಸು ಆಡು ಟಗರುಗಳನ್ನೂ ಒಂದು ಬೆಳವಕ್ಕಿಯನ್ನೂ ಒಂದು ಪಾರಿವಾಳದ ಮರಿಯನ್ನೂ ನನಗಾಗಿ ತೆಗೆದುಕೋ ಅಂದನು.

ಆದಿಕಾಂಡ 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी