ಯೆಹೆಜ್ಕೇಲನು 35:5

ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 35

3ಅದಕ್ಕೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಸೇಯಾರ್‌ ಪರ್ವತವೇ, ನಾನು ನಿನಗೆ ವಿರುದ್ಧವಾಗಿ ದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.

4ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವಿ; ಆಗ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.

5ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.

6ಆದದರಿಂದ ದೇವರಾದ ಕರ್ತನು ಹೇಳುತ್ತಾನೆ-- ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು; ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟು ವದು; ನೀನು ರಕ್ತಸುರಿಸುವದಕ್ಕೆ ಹೇಸದೆ ಹೋದ ಕಾರಣ ರಕ್ತಪ್ರವಾಹವೇ ನಿನ್ನ ಬೆನ್ನು ಹತ್ತುವದು.

7ಹೀಗೆ ನಾನು ಸೇಯಾರ್‌ ಪರ್ವತವನ್ನು ಸಂಪೂರ್ಣ ಹಾಳು ಮಾಡುವೆನು; ಅದರೊಳಗೆ ಹಾದು ಹೋಗು ವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.

ಯೆಹೆಜ್ಕೇಲನು 35 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी