ಅದಕ್ಕೆ ಫಿಲಿಪ್ಪನು ತನ್ನ ಬಾಯನ್ನು ತೆರೆದು ಅದೇ ಬರಹದಿಂದ ಆರಂಭಿಸಿ ಅವನಿಗೆ ಯೇಸುವಿನ ವಿಷಯವನ್ನು ಸಾರಿದನು.
33ಆತನಿಗುಂಟಾದ ದೀನಾ ವಸ್ಥೆಯಲ್ಲಿ ಆತನಿಗೆ ನ್ಯಾಯವು ಇಲ್ಲದೆ ಹೋಯಿತು. ಆತನ ವಂಶಾವಳಿಯನ್ನು ಯಾರು ಪ್ರಕಟಿಸುವರು? ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದು ಬಿಟ್ಟರಲ್ಲಾ ಎಂಬದೇ.
34ಕಂಚುಕಿಯು--ಇದನ್ನು ಪ್ರವಾದಿಯು ಯಾರ ವಿಷಯದಲ್ಲಿ ಹೇಳಿದ್ದಾನೆ? ತನ್ನ ವಿಷಯದಲ್ಲಿಯೋ? ಮತ್ತೊಬ್ಬನ ವಿಷಯದಲ್ಲಿಯೋ? ನನಗೆ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಿಕೊಂಡನು.
35ಅದಕ್ಕೆ ಫಿಲಿಪ್ಪನು ತನ್ನ ಬಾಯನ್ನು ತೆರೆದು ಅದೇ ಬರಹದಿಂದ ಆರಂಭಿಸಿ ಅವನಿಗೆ ಯೇಸುವಿನ ವಿಷಯವನ್ನು ಸಾರಿದನು.
36ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿನ ಬಳಿಗೆ ಬಂದರು. ಕಂಚುಕಿಯು--ಅಗೋ, ನೀರು; ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕೆ ನನಗೆ ಅಡ್ಡಿ ಏನು ಅಂದನು.
37ಅದಕ್ಕೆ ಫಿಲಿಪ್ಪನು--ನೀನು ನಿನ್ನ ಹೃದಯಪೂರ್ವಕವಾಗಿ ನಂಬುವದಾದರೆ ಆಗ ಬಹುದು ಎಂದು ಹೇಳಿದನು. ಅದಕ್ಕೆ ಅವನು ಪ್ರತ್ಯು ತ್ತರವಾಗಿ--ಯೇಸು ಕ್ರಿಸ್ತನನ್ನು ದೇವಕುಮಾರನೆಂದು ನಾನು ನಂಬುತ್ತೇನೆ ಎಂದು ಹೇಳಿ
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ