೨ ಪೂರ್ವಕಾಲವೃತ್ತಾಂತ 22:4

ಆದಕಾರಣ ಅವನು ಅಹಾಬನ ಮನೆಯವರ ಹಾಗೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನ ತಂದೆ ಸತ್ತ ತರುವಾಯ ಇವರು ಅವರ ನಾಶನಕ್ಕೆ ಅವನ ಸಲಹೆಗಾರರಾಗಿದ್ದರು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 22

2ಅಹಜ್ಯನು ಆಳಲು ಆರಂಭಿಸಿದಾಗ ನಾಲ್ವತ್ತೆರಡು ವರುಷದವ ನಾಗಿದ್ದು ಯೆರೂಸಲೇಮಿನಲ್ಲಿ ಒಂದು ವರುಷ ಆಳಿ ದನು. ಅವನ ತಾಯಿಯ ಹೆಸರು ಅತಲ್ಯಳು; ಈಕೆಯು ಒಮ್ರಿಯ ಮಗಳಾಗಿದ್ದಳು.

3ಅವನು ಅಹಾಬನ ಮನೆ ಯವರ ಮಾರ್ಗಗಳಲ್ಲಿ ನಡೆದನು. ಹೇಗಂದರೆ ದುಷ್ಟ ನಾಗಿರುವದಕ್ಕೆ ಅವನ ತಾಯಿ ಅವನಿಗೆ ಆಲೋಚನೆ ಹೇಳುವವಳಾಗಿದ್ದಳು.

4ಆದಕಾರಣ ಅವನು ಅಹಾಬನ ಮನೆಯವರ ಹಾಗೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನ ತಂದೆ ಸತ್ತ ತರುವಾಯ ಇವರು ಅವರ ನಾಶನಕ್ಕೆ ಅವನ ಸಲಹೆಗಾರರಾಗಿದ್ದರು.

5ಅವನು ಇವರ ಯೋಚನೆಯ ಪ್ರಕಾರ ನಡೆದು ಗಿಲ್ಯಾದಿನಲ್ಲಿರುವ ರಾಮೋತಿನ ಬಳಿಯಲ್ಲಿ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧ ಮಾಡಲು ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗ ನಾದ ಯೆಹೋರಾಮನ ಸಂಗಡ ಹೋದನು.

6ಆದರೆ ಅರಾಮ್ಯರು ಯೆಹೋರಾಮನನ್ನು ಹೊಡೆದರು. ಅವನು ಅರಾಮಿನ ಹಜಾಯೇಲನ ಸಂಗಡ ಯುದ್ಧ ಮಾಡುವಾಗ ರಾಮದಲ್ಲಿ ಗಾಯಗಳನ್ನು ಹೊಂದಿದ್ದ ರಿಂದ ಇಜ್ರೇಲಿನಲ್ಲಿ ಗುಣಮಾಡಿಕೊಳ್ಳಲು ತಿರಿಗಿದನು. ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಇಜ್ರೇಲಿನಲ್ಲಿರುವ ಅಹಾ ಬನ ಮಗನಾದ ಯೆಹೋರಾಮನನ್ನು ನೋಡಲು ಬಂದನು; ಯಾಕಂದರೆ ಇವನು ರೋಗಸ್ಥನಾಗಿದ್ದನು.

೨ ಪೂರ್ವಕಾಲವೃತ್ತಾಂತ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी