ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ,
9ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು ನಾನು ದೇವರೆಂದು ಹೇಳುವಿಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರ ಪ್ರಾಣಿಯೇ;
10ನೀನು ಅನ್ಯರ ಕೈಯಿಂದ ಸುನ್ನತಿ ಹೀನರ ಮರಣಕ್ಕೆ ಗುರಿ ಯಾಗುವಿ ನಾನೇ ಇದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳಿದ್ದಾನೆ.
11ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ,
12ಮನುಷ್ಯಪುತ್ರನೇ, ತೂರಿನ ಅರಸನ ವಿಷಯದಲ್ಲಿ ಶೋಕಗೀತೆಯನ್ನೆತ್ತಿ ಅವನಿಗೆ ಹೀಗೆ ಹೇಳು--ದೇವರಾದ ಕರ್ತನು ಹೀಗೆ ಹೇಳು ತ್ತಾನೆ, ಸಂಪೂರ್ಣ ಜ್ಞಾನಿ, ಪರಿಪೂರ್ಣ ಸುಂದರವಾದ ನೀನು ಲೆಕ್ಕವನ್ನು ಮುದ್ರಿಸುತ್ತೀ.
13ದೇವರ ತೋಟ ವಾದ ಏದೆನಿನಲ್ಲಿ ನೀನಿದ್ದಿ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇ ಧಿಕ, ಕೆಂಪು, ಸ್ಪಟಿಕ, ಚಿನ್ನ ಈ ಅಮೂಲ್ಯವಾದವು ಗಳಿಂದ ಭೂಷಿತವಾಗಿದ್ದಿ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ