ಅಪೊಸ್ತಲರ ಕೃತ್ಯಗಳು 13:3

ಆಗ ಅವರು ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ಅವರನ್ನು ಕಳುಹಿಸಿ ಕೊಟ್ಟರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 13

1ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಕೆಲವರು ಪ್ರವಾದಿಗಳೂ ಬೋಧಕರೂ ಇದ್ದರು; ಯಾರಾರೆಂದರೆ, ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಚತುರಾಧಿ ಪತಿಯಾದ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಇವರೇ.

2ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿ ತ್ರಾತ್ಮನು--ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕೆ ನನಗಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು.

3ಆಗ ಅವರು ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ಅವರನ್ನು ಕಳುಹಿಸಿ ಕೊಟ್ಟರು.

4ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವ ರಾಗಿ ಸೆಲ್ಯೂಕ್ಯಕ್ಕೆ ಹೊರಟುಹೋದರು. ಅಲ್ಲಿಂದ ಸಮುದ್ರ ಪ್ರಯಾಣವಾಗಿ ಕುಪ್ರಕ್ಕೆ ಹೋದರು.

5ಅವರು ಸಲವಿಾಸಿನಲ್ಲಿದ್ದಾಗ ಯೆಹೂದ್ಯರ ಸಭಾ ಮಂದಿರಗಳಲ್ಲಿ ದೇವರವಾಕ್ಯವನ್ನು ಸಾರಿದರು. ಯೋಹಾನನು ಸಹ ಪರಿಚಾರಕನಾಗಿ ಅವರ ಸಂಗಡ ಇದ್ದನು.

ಅಪೊಸ್ತಲರ ಕೃತ್ಯಗಳು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी