ಯೆರೆಮಿಯ 34:11

ಅವರು ತರುವಾಯ ತಿರುಗಿಕೊಂಡು ತಾವು ಬಿಡುಗಡೆಯಾಗಿ ಕಳುಹಿಸಿಬಿಟ್ಟಿದ್ದ ದಾಸದಾಸಿ ಯರನ್ನು ತಿರಿಗಿ ಬರಮಾಡಿ ಅವರನ್ನು ದಾಸ ದಾಸಿಯ ರಾಗಿಯೂ ವಶಮಾಡಿಕೊಂಡರು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 34

9ಒಬ್ಬೊಬ್ಬನು ತನ್ನ ತನ್ನ ದಾಸ ದಾಸಿಯನ್ನು ಅವನು ಇಬ್ರೀಯನಾಗಲಿ ಇಬ್ರೀಯಳಾಗಲಿ ಇದ್ದರೆ ಸ್ವತಂತ್ರರಾಗಿ ಕಳುಹಿಸ ಬೇಕೆಂದು ಒಬ್ಬನಾದರೂ ಅವರಿಂದ ಅಂದರೆ ತನ್ನ ಸಹೋದರನಾದ ಯೆಹೂದ್ಯನಿಂದ ಸೇವೆ ತಕ್ಕೊಳ್ಳ ಬೇಡವೆಂದು ಅವರಿಗೆ ಬಿಡುಗಡೆಯನ್ನು ಸಾರಿದ ಮೇಲೆ ಯೆರೆವಿಾಯನಿಗೆ ಕರ್ತನಿಂದ ಉಂಟಾದ ವಾಕ್ಯವು.

10ಆಗ ಒಡಂಬಡಿಕೆಯಲ್ಲಿ ಸೇರಿದ ಪ್ರಧಾನರೆಲ್ಲರೂ ಜನರೆಲ್ಲರೂ ಒಬ್ಬೊಬ್ಬನು ತನ್ನ ತನ್ನ ದಾಸನನ್ನೂ ತನ್ನ ತನ್ನ ದಾಸಿಯನ್ನೂ ಬಿಡುಗಡೆಯಾಗಿ ಕಳುಹಿಸ ಬೇಕೆಂದೂ ಅವರಿಂದ ಸೇವೆ ತಕ್ಕೊಳ್ಳಬಾರದೆಂದೂ ಕೇಳಿದ ಮೇಲೆ ವಿಧೇಯರಾಗಿದ್ದು ಅವರನ್ನು ಕಳುಹಿಸಿ ಬಿಟ್ಟರು.

11ಅವರು ತರುವಾಯ ತಿರುಗಿಕೊಂಡು ತಾವು ಬಿಡುಗಡೆಯಾಗಿ ಕಳುಹಿಸಿಬಿಟ್ಟಿದ್ದ ದಾಸದಾಸಿ ಯರನ್ನು ತಿರಿಗಿ ಬರಮಾಡಿ ಅವರನ್ನು ದಾಸ ದಾಸಿಯ ರಾಗಿಯೂ ವಶಮಾಡಿಕೊಂಡರು.

12ಆದದರಿಂದ ಕರ್ತನ ವಾಕ್ಯವು ಯೆರೆವಿಾಯನಿಗೆ ಕರ್ತನಿಂದ ಉಂಟಾಗಿ ಹೇಳಿದ್ದೇನಂದರೆ--

13ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನಿಮ್ಮ ಪಿತೃಗಳನ್ನು ಐಗುಪ್ತದೇಶದೊಳಗಿದ್ದ ದಾಸರ ಮನೆಯೊಳಗಿಂದ ಹೊರಗೆ ತಂದ ದಿನದಲ್ಲಿ ಅವರ ಸಂಗಡ ಒಡಂಬಡಿಕೆಮಾಡಿ

ಯೆರೆಮಿಯ 34 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी