ಯೆಹೆಜ್ಕೇಲನು 36:9

ಇಗೋ, ನಾನು ನಿಮ್ಮ ಪಕ್ಷದಲ್ಲಿ ಇದ್ದೇವೆ, ನಾನು ನಿಮ್ಮ ಕಡೆಗೆ ತಿರುಗಿ ಕೊಳ್ಳುತ್ತೇನೆ. ನೀವು ಉತ್ತುಬಿತ್ತುವಿರಿ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 36

7ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನನ್ನ ಕೈಯನ್ನು ಮೇಲೆತ್ತಿದ್ದೇನೆ, ನಿಶ್ಚಯವಾಗಿ ನಿನ್ನ ಮೇಲಿ ರುವ ಅನ್ಯಜನಾಂಗಗಳು ತಾವಾಗಿಯೇ ತಮ್ಮ ನಿಂದೆಯನ್ನು ಹೊರುವರು.

8ಆದರೆ ಓ ಇಸ್ರಾಯೇಲ್‌ ಪರ್ವತಗಳೇ, ನೀವು ನಿಮ್ಮ ಕೊಂಬೆಗಳನ್ನು ಹೊರಡಿಸಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಫಲಕೊಡುವಿರಿ; ಅವರ ಬರುವಿಕೆಯು ಸವಿಾಪವಾಗಿದೆ.

9ಇಗೋ, ನಾನು ನಿಮ್ಮ ಪಕ್ಷದಲ್ಲಿ ಇದ್ದೇವೆ, ನಾನು ನಿಮ್ಮ ಕಡೆಗೆ ತಿರುಗಿ ಕೊಳ್ಳುತ್ತೇನೆ. ನೀವು ಉತ್ತುಬಿತ್ತುವಿರಿ.

10ನಾನು ಮನುಷ್ಯರನ್ನೂ ಎಲ್ಲಾ ಇಸ್ರಾಯೇಲ್‌ ಮನೆತನದ ವರನ್ನೂ ಅಂದರೆ ಎಲ್ಲರನ್ನೂ ನಿನ್ನ ಮೇಲೆ ವೃದ್ಧಿ ಮಾಡುತ್ತೇನೆ, ಪಟ್ಟಣಗಳು ಜನಭರಿತವಾಗುವವು, ಹಾಳಾದ ಪ್ರದೇಶಗಳು ಕಟ್ಟಲ್ಪಡುವವು;

11ನಾನು ನಿಮ್ಮಲ್ಲಿ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡು ವೆನು; ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವವು; ನಾನು ನಿಮ್ಮನ್ನು ನಿಮ್ಮ ಹಳೆಯ ಸ್ಥಳಗಳಲ್ಲಿ ವಾಸಿಸುವಂತೆ ಮಾಡಿ ನಿಮ್ಮ ಮೊದಲಿನ ಸ್ಥಿತಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ.

ಯೆಹೆಜ್ಕೇಲನು 36 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी