೨ ಪೂರ್ವಕಾಲವೃತ್ತಾಂತ 33:19

ಇದಲ್ಲದೆ ಅವನ ಪ್ರಾರ್ಥನೆಯೂ ಅವನು ದೇವ ರಿಗೆ ಭಿನ್ನವಿಸಿದ್ದೂ ಅವನ ಸಮಸ್ತ ಪಾಪವೂ ಅವನ ಅಪರಾಧವೂ ಅವನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಉನ್ನತ ಸ್ಥಳಗಳಲ್ಲಿ ಕಟ್ಟಿಸಿದ ತೋಪುಗಳೂ ಕೆತ್ತಿಸಿದ ವಿಗ್ರಹಗಳೂ ಸ್ಥಾಪಿಸಿದ ಸ್ಥಳಗಳೂ ಇಗೋ, ಪ್ರವಾದಿ ಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿವೆ.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 33

17ಆದಾಗ್ಯೂ ಜನರು ಇನ್ನೂ ಉನ್ನತ ಸ್ಥಳ ಗಳಲ್ಲಿಯೇ ತಮ್ಮ ದೇವರಾದ ಕರ್ತನಿಗೆ ಮಾತ್ರ ಬಲಿಯನ್ನರ್ಪಿಸುತ್ತಾ ಇದ್ದರು.

18ಮನಸ್ಸೆಯ ಇತರ ಕ್ರಿಯೆಗಳೂ ಅವನು ತನ್ನ ದೇವರಿಗೆ ಮಾಡಿದ ಪ್ರಾರ್ಥನೆಯೂ ಇಸ್ರಾಯೇಲಿನ ದೇವರಾದ ಕರ್ತನ ನಾಮದಲ್ಲಿ ಅವನ ಸಂಗಡ ಮಾತನಾಡಿದ ಪ್ರವಾದಿಗಳ ಮಾತುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

19ಇದಲ್ಲದೆ ಅವನ ಪ್ರಾರ್ಥನೆಯೂ ಅವನು ದೇವ ರಿಗೆ ಭಿನ್ನವಿಸಿದ್ದೂ ಅವನ ಸಮಸ್ತ ಪಾಪವೂ ಅವನ ಅಪರಾಧವೂ ಅವನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಉನ್ನತ ಸ್ಥಳಗಳಲ್ಲಿ ಕಟ್ಟಿಸಿದ ತೋಪುಗಳೂ ಕೆತ್ತಿಸಿದ ವಿಗ್ರಹಗಳೂ ಸ್ಥಾಪಿಸಿದ ಸ್ಥಳಗಳೂ ಇಗೋ, ಪ್ರವಾದಿ ಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿವೆ.

20ಮನಸ್ಸೆಯು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನನ್ನು ಅವನ ಸ್ವಂತ ಮನೆಯಲ್ಲಿ ಹೂಣಿಟ್ಟರು; ಅವನ ಮಗನಾದ ಆಮೋನನು ಅವನಿಗೆ ಬದಲಾಗಿ ಆಳಿದನು.

21ಆಮೋನನು ಆಳಲು ಆರಂಭಿಸಿದಾಗ ಇಪ್ಪತ್ತೆ ರಡು ವರುಷದವನಾಗಿದ್ದು, ಯೆರೂಸಲೇಮಿನಲ್ಲಿ ಎರಡು ವರುಷ ಆಳಿದನು.

೨ ಪೂರ್ವಕಾಲವೃತ್ತಾಂತ 33 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी