ಆತನು ಯೆರೂಸಲೇಮನ್ನು ಸ್ಥಾಪಿಸಿ ಅದು ಭೂಮಿಯಲ್ಲಿ ಸ್ತುತಿಸಲ್ಪಡುವಂತೆ ಮಾಡುವವರೆಗೂ ಆತನಿಗೆ ವಿಶ್ರಾಂತಿ ಕೊಡಬೇಡಿರಿ.
5ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
6ಓ ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲಿ ನಲ್ಲೂ ರಾತ್ರಿಯಲ್ಲೂ ಮೌನವಾಗಿರುವದೇ ಇಲ್ಲ. ಕರ್ತನನ್ನು ಜ್ಞಾಪಕಪಡಿಸುವವರೇ, ಸುಮ್ಮನಿರಬೇಡಿರಿ.
7ಆತನು ಯೆರೂಸಲೇಮನ್ನು ಸ್ಥಾಪಿಸಿ ಅದು ಭೂಮಿಯಲ್ಲಿ ಸ್ತುತಿಸಲ್ಪಡುವಂತೆ ಮಾಡುವವರೆಗೂ ಆತನಿಗೆ ವಿಶ್ರಾಂತಿ ಕೊಡಬೇಡಿರಿ.
8ಕರ್ತನು ತನ್ನ ಬಲಗೈ ಯಿಂದಲೂ ತನ್ನ ತ್ರಾಣವುಳ್ಳ ತೋಳಿನಿಂದಲೂ ಆಣೆ ಯಿಟ್ಟುಕೊಂಡದ್ದೇನಂದರೆ--ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವದಿಲ್ಲ, ಮತ್ತು ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ಅನ್ಯರ ಪುತ್ರರು ಕುಡಿಯುವದಿಲ್ಲ;
9ಆದರೆ ಅದನ್ನು ಕೂಡಿಸಿದವರು ಅದನ್ನು ತಿಂದು ಕರ್ತನನ್ನು ಸ್ತುತಿಸುವರು; ಅದನ್ನು ಸೇರಿಸಿ ತಂದವರು ನನ್ನ ಪರಿಶುದ್ಧ ಅಂಗಳಗಳಲ್ಲಿ ಅದನ್ನು ಕುಡಿಯುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ