ನೆಹೆಮಿಯ 4:16

ಅಂದಿನಿಂದ ಏನಾಯಿತಂದರೆ ನನ್ನ ಸೇವಕರಲ್ಲಿ ಅರ್ಧಜನರು ಕೆಲಸವನ್ನು ನಡಿಸಿದರು; ಮಿಕ್ಕಾದ ಅರ್ಧ ಜನರು ಈಟಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಕವಚಗಳನ್ನೂ ಧರಿಸಿದರು. ಪ್ರಧಾನರು ಯೆಹೂದ ಮನೆಯವರ ಹಿಂದೆ ನಿಂತರು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 4

14ನಾನು ನೋಡಿದ ತರುವಾಯ ಎದ್ದು ಶ್ರೇಷ್ಠರಿಗೂ ಅಧಿಕಾರ ಸ್ಥರಿಗೂ ಇತರ ಜನರಿಗೂ--ನೀವು ಅವರಿಗೋಸ್ಕರ ಭಯಪಡಬೇಡಿರಿ; ದೊಡ್ಡವನಾಗಿಯೂ ಭಯಂಕರ ನಾಗಿಯೂ ಇರುವ ಕರ್ತನನ್ನು ಜ್ಞಾಪಕಮಾಡಿ ಕೊಂಡು ನಿಮ್ಮ ಸಹೋದರರಿಗೋಸ್ಕರ, ಕುಮಾರ, ಕುಮಾರ್ತೆಯರಿಗೋಸ್ಕರ, ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ ಅಂದೆನು.

15ಆ ವರ್ತಮಾನ ನಮಗೆ ತಿಳಿಯಿತೆಂದೂ ದೇವರು ತಮ್ಮ ಆಲೋಚನೆಯನ್ನು ವ್ಯರ್ಥಮಾಡಿದನೆಂದೂ ನಮ್ಮ ಶತ್ರುಗಳು ಕೇಳಿದಾಗ ನಾವೆಲ್ಲರೂ ಗೋಡೆಗೆ ತಿರುಗಿ ಬಂದೆವು; ಪ್ರತಿ ಮನುಷ್ಯನು ತನ್ನ ಕೆಲಸಕ್ಕೆ ಸೇರಿದನು.

16ಅಂದಿನಿಂದ ಏನಾಯಿತಂದರೆ ನನ್ನ ಸೇವಕರಲ್ಲಿ ಅರ್ಧಜನರು ಕೆಲಸವನ್ನು ನಡಿಸಿದರು; ಮಿಕ್ಕಾದ ಅರ್ಧ ಜನರು ಈಟಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಕವಚಗಳನ್ನೂ ಧರಿಸಿದರು. ಪ್ರಧಾನರು ಯೆಹೂದ ಮನೆಯವರ ಹಿಂದೆ ನಿಂತರು.

17ಗೋಡೆಯ ಮೇಲೆ ಕಟ್ಟುವವರೂ ಹೊರೆಗಾರರೂ ಹೊರಿಸುವವರೂ ಒಂದು ಕೈಯಲ್ಲಿ ಕೆಲಸವನ್ನು ನಡಿಸಿ ಮತ್ತೊಂದು ಕೈಯಲ್ಲಿ ಆಯುಧವನ್ನು ಹಿಡುಕೊಂಡಿದ್ದರು.

18ಕಟ್ಟು ವವರು ಒಬ್ಬೊಬ್ಬರು ತಮ್ಮ ಕತ್ತಿಯನ್ನು ತಮ್ಮ ನಡುವಿ ನಲ್ಲಿ ಕಟ್ಟಿಕೊಂಡು ಕಟ್ಟುತ್ತಿದ್ದರು. ತುತೂರಿ ಊದುವ ವನು ನನ್ನ ಬಳಿಯಲ್ಲಿದ್ದನು.

ನೆಹೆಮಿಯ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी