ಒಂದು ದಿನ ದೇವರ ಪುತ್ರರು ಕರ್ತನ ಮುಂದೆ ನಿಂತುಕೊಳ್ಳುವದಕ್ಕೆ ಬಂದಾಗ ಸೈತಾನನು ಸಹ ಅವ ರೊಂದಿಗೆ ಬಂದನು.
4ಅವನ ಕುಮಾರರು ಹೋಗಿ ತಮ್ಮ ತಮ್ಮ ಮನೆಗಳಲ್ಲಿ ಅವನವನ ದಿವಸದಲ್ಲಿ ಔತಣವನ್ನು ಮಾಡಿಸಿ ತಮ್ಮ ಸಂಗಡ ತಿನ್ನುವದಕ್ಕೂ ಕುಡಿಯುವ ದಕ್ಕೂ ತಮ್ಮ ಮೂವರು ಸಹೋದರಿಯರನ್ನು ಕರೆ ಕಳುಹಿಸುತ್ತಿದ್ದರು.
5ಔತಣದ ದಿನಗಳು ಮುಗಿದ ಬಳಿಕ ಯೋಬನು ಅವರನ್ನು ಕರೆಕಳುಹಿಸಿ ಅವರನ್ನು ಶುದ್ಧಿ ಮಾಡಿ ಬೆಳಿಗ್ಗೆ ಎದ್ದು ಅವರೆಲ್ಲರ ಲೆಕ್ಕದ ಪ್ರಕಾರ ದಹನಬಲಿಗಳನ್ನು ಅರ್ಪಿಸುತ್ತಿದ್ದನು; ಯೋಬನುಒಂದುವೇಳೆ ನನ್ನ ಕುಮಾರರು ಪಾಪ ಮಾಡಿ ತಮ್ಮ ಹೃದಯಗಳಲ್ಲಿ ದೇವರನ್ನು ಶಪಿಸಿರಬಹುದು ಅಂದು ಕೊಂಡನು. ಹೀಗೆಯೇ ಯೋಬನು ಕ್ರಮವಾಗಿ ಮಾಡುತ್ತಿದ್ದನು.
6ಒಂದು ದಿನ ದೇವರ ಪುತ್ರರು ಕರ್ತನ ಮುಂದೆ ನಿಂತುಕೊಳ್ಳುವದಕ್ಕೆ ಬಂದಾಗ ಸೈತಾನನು ಸಹ ಅವ ರೊಂದಿಗೆ ಬಂದನು.
7ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದಿ ಅಂದನು. ಸೈತಾನನು ಕರ್ತನಿಗೆ ಪ್ರತ್ಯುತ್ತರವಾಗಿ--ಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ತಿರುಗಾಡಿ ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆದಾಡಿ ಬಂದೆನು ಅಂದನು.
8ಕರ್ತನು ಸೈತಾನನಿಗೆ--ನನ್ನ ಸೇವಕನಾದ ಯೋಬನ ಮೇಲೆ ನೀನು ಗಮನವಿಟ್ಟೆಯಾ? ಅವನು ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲಗುವವನೂ ಆಗಿದ್ದಾನೆ ಅವನ ಹಾಗೆ ಭೂಮಿಯಲ್ಲಿ ಒಬ್ಬನೂ ಇಲ್ಲ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ