ಇಲ್ಲಿಯೂ ನಿನ್ನ ಹೆಸರನ್ನು ಹೇಳಿಕೊಳ್ಳುವವರೆಲ್ಲರನ್ನು ಬಂಧಿಸುವ ಅಧಿಕಾರವನ್ನು ಪ್ರಧಾನಯಾಜಕರಿಂದ ಹೊಂದಿದ್ದಾನೆ ಅಂದನು.
12ಅನನೀಯನೆಂಬ ಒಬ್ಬ ಮನುಷ್ಯನು ಒಳಗೆ ಬಂದು ತನಗೆ ತಿರಿಗಿ ಕಣ್ಣು ಕಾಣುವಂತೆ ತನ್ನ ಮೇಲೆ ಕೈಯಿಡುವದನ್ನು ದರ್ಶನದಲ್ಲಿ ನೋಡಿದ್ದಾನೆ ಎಂದು ಹೇಳಿದನು.
13ಅದಕ್ಕೆ ಅನನೀಯನು--ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನ ಪರಿಶುದ್ಧರಿಗೆ ಎಷ್ಟೋ ಕೇಡನ್ನುಂಟು ಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ನಾನು ಕೇಳಿದ್ದೇನೆ;
14ಇಲ್ಲಿಯೂ ನಿನ್ನ ಹೆಸರನ್ನು ಹೇಳಿಕೊಳ್ಳುವವರೆಲ್ಲರನ್ನು ಬಂಧಿಸುವ ಅಧಿಕಾರವನ್ನು ಪ್ರಧಾನಯಾಜಕರಿಂದ ಹೊಂದಿದ್ದಾನೆ ಅಂದನು.
15ಆದರೆ ಕರ್ತನು ಅವನಿಗೆ--ನೀನು ಹೋಗು; ಯಾಕಂದರೆ ಆ ಮನುಷ್ಯನು ಅನ್ಯಜನರ ಮುಂದೆಯೂ ಅರಸುಗಳ ಮುಂದೆಯೂ ಇಸ್ರಾಯೇಲ್ಯರ ಮುಂದೆಯೂ ನನ್ನ ಹೆಸರನ್ನು ಹೊರುವದಕ್ಕಾಗಿ ನಾನು ಆರಿಸಿಕೊಂಡ ಪಾತ್ರೆಯಾಗಿದ್ದಾನೆ.
16ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಕಠಿಣವಾದ ಶ್ರಮೆಯನ್ನನುಭವಿಸಬೇಕೆಂಬದನ್ನು ನಾನೇ ಅವನಿಗೆ ತೋರಿಸುವೆನು ಎಂದು ಹೇಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ