ಪ್ರಸಂಗಿ 2:18

ಹೌದು, ಸೂರ್ಯನ ಕೆಳಗೆ ಪಟ್ಟ ನನ್ನ ಎಲ್ಲಾ ಪ್ರಯಾಸವನ್ನು ನಾನು ಹಗೆಮಾಡಿದೆನು; ನನ್ನ ತರು ವಾಯ ಬರುವ ಮನುಷ್ಯನಿಗೆ ನಾನು ಇದನ್ನೆಲ್ಲಾ ಬಿಟ್ಟುಬಿಡಬೇಕು.

ಸಂದರ್ಭದೊಂದಿಗೆ ಓದಿ · ಪ್ರಸಂಗಿ 2

16ಮೂಢನಿಗಿಂತ ಜ್ಞಾನವಂತನ ಜ್ಞಾಪ ಕವು ಎಂದಿಗೂ ಇರುವದಿಲ್ಲ; ಈಗ ಇರುವದು ಬರುವ ದಿವಸಗಳಲ್ಲಿ ಮರೆಯಲ್ಪಡುತ್ತದೆ. ಮೂಢನಂತೆ ಜ್ಞಾನಿಯೂ ಸಾಯುವದು ಹೇಗೆ?

17ಆದಕಾರಣ ಜೀವವನ್ನು ನಾನು ಹಗೆಮಾಡಿದೆನು; ಸೂರ್ಯನ ಕೆಳಗೆ ನಡೆಯುವ ಕಾರ್ಯವು ವ್ಯಥೆಯಾಗಿ ನನಗೆ ತೋರಿತು; ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕ ರವೂ ಆಗಿವೆ.

18ಹೌದು, ಸೂರ್ಯನ ಕೆಳಗೆ ಪಟ್ಟ ನನ್ನ ಎಲ್ಲಾ ಪ್ರಯಾಸವನ್ನು ನಾನು ಹಗೆಮಾಡಿದೆನು; ನನ್ನ ತರು ವಾಯ ಬರುವ ಮನುಷ್ಯನಿಗೆ ನಾನು ಇದನ್ನೆಲ್ಲಾ ಬಿಟ್ಟುಬಿಡಬೇಕು.

19ಅವನು ಜ್ಞಾನಿಯೋ ಮೂಢ ನೋ ಯಾರಿಗೆ ಗೊತ್ತು? ಆದರೂ ನಾನು ಪಟ್ಟ ಎಲ್ಲಾ ಪ್ರಯಾಸದ ಮೇಲೆಯೂ ಸೂರ್ಯನ ಕೆಳಗೆ ನಾನು ಜ್ಞಾನಿಯೆಂದು ತೋರ್ಪಡಿಸಿಕೊಂಡವರ ಮೇಲೆಯೂ ಅವನು ಆಳುವನು. ಇದೂ ವ್ಯರ್ಥವೇ.

20ಆದದರಿಂದ ಸೂರ್ಯನ ಕೆಳಗೆ ಪ್ರಯಾಸ ಪಟ್ಟ ಎಲ್ಲಾ ಪ್ರಯಾಸದ ವಿಷಯವಾಗಿ ನನ್ನ ಹೃದಯವು ನಿರಾಶೆಗೊಳ್ಳುವಂತೆ ನಾನು ತಿರುಗಾಡಿದೆನು.

ಪ್ರಸಂಗಿ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी