ನೆಹೆಮಿಯ 2:18

ನನ್ನ ಮೇಲೆ ಒಳ್ಳೇದಾಗಿದ್ದ ನನ್ನ ದೇವರ ಕೈಯನ್ನೂ ಅರಸನು ನನಗೆ ಹೇಳಿದ ಮಾತುಗಳನ್ನೂ ಅವರಿಗೆ ತಿಳಿಸಿದೆನು. ಆಗ ಅವರು--ನಾವು ಎದ್ದು ಕಟ್ಟುವೆವು ಎಂದು ಹೇಳಿ ತಮ್ಮ ಕೈಗಳನ್ನು ಈ ಒಳ್ಳೇ ಕೆಲಸಕ್ಕೆ ಬಲಪಡಿಸಿದರು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 2

16ನಾನು ಎಲ್ಲಿ ಹೋದೆನೆಂದೂ ಏನು ಮಾಡಿದೆ ನೆಂದೂ ಅಧಿಕಾರಸ್ಥರು ತಿಳಿಯದೆ ಇದ್ದರು. ಆ ವರೆಗೆ ನಾನು ಯೆಹೂದ್ಯರಿಗಾದರೂ ಯಾಜಕರಿಗಾದರೂ ಹಿರಿಯರಿಗಾದರೂ ಅಧಿಕಾರಸ್ಥರಿಗಾದರೂ ಕೆಲಸ ಮಾಡುವ ಇತರ ಜನರಿಗಾದರೂ ತಿಳಿಸಿದ್ದಿಲ್ಲ.

17ಆಗ ನಾನು ಅವರಿಗೆ ಹೇಳಿದೆನು--ನಮಗೆ ಇರುವ ಕೇಡನ್ನು ನೀವು ನೋಡುತ್ತೀರಿ. ಯೆರೂಸಲೇಮು ಹಾಳಾಗಿ ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟವಲ್ಲಾ ನಾವು ಇನ್ನು ಮೇಲೆ ನಿಂದೆಗೊಳಗಾಗಿರದ ಹಾಗೆ ಯೆರೂಸಲೇಮಿನ ಗೋಡೆಯನ್ನು ಕಟ್ಟುವ ಬನ್ನಿರಿ.

18ನನ್ನ ಮೇಲೆ ಒಳ್ಳೇದಾಗಿದ್ದ ನನ್ನ ದೇವರ ಕೈಯನ್ನೂ ಅರಸನು ನನಗೆ ಹೇಳಿದ ಮಾತುಗಳನ್ನೂ ಅವರಿಗೆ ತಿಳಿಸಿದೆನು. ಆಗ ಅವರು--ನಾವು ಎದ್ದು ಕಟ್ಟುವೆವು ಎಂದು ಹೇಳಿ ತಮ್ಮ ಕೈಗಳನ್ನು ಈ ಒಳ್ಳೇ ಕೆಲಸಕ್ಕೆ ಬಲಪಡಿಸಿದರು.

19ಆದರೆ ಹೋರೋನ್ಯನಾದ ಸನ್ಬಲ್ಲಟನೂ ಅಮ್ಮೋನ್ಯನ ದಾಸನಾದ ಟೋಬೀಯನೂ ಅರಬಿ ಯನಾದ ಗೆಷೆಮನೂ ಇದನ್ನು ಕೇಳಿದಾಗ ಅವರು ನಮ್ಮನ್ನು ಗೇಲಿಮಾಡಿ ತಿರಸ್ಕರಿಸಿ--ನೀವು ಮಾಡುವ ಈ ಕಾರ್ಯವೇನು? ನೀವು ಅರಸನಿಗೆ ವಿರೋಧವಾಗಿ ತಿರಿಗಿ ಬೀಳುವಿರೋ ಅಂದರು.

20ಆಗ ನಾನು ಅವರಿಗೆ ಪ್ರತ್ಯುತ್ತರವಾಗಿ--ಪರಲೋಕದ ದೇವರು ನಮಗೆ ಸಫಲ ಮಾಡುವನು; ಆತನ ಸೇವಕರಾದ ನಾವು ಎದ್ದು ಕಟ್ಟುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಪಾಲಾದರೂ ಹಕ್ಕಾದರೂ ಜ್ಞಾಪಕಾರ್ಥವಾದ ಗುರುತಾದರೂ ಇಲ್ಲವೆಂದು ಹೇಳಿದನು.

ನೆಹೆಮಿಯ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी