ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ರೂಪವು ಹೊರ ಟಿತು. ಅವುಗಳ ಆಕಾರವೇನಂದರೆ--ಅವುಗಳಿಗೆ ಮನುಷ್ಯನ ರೂಪವಿತ್ತು.
3ಕರ್ತನ ವಾಕ್ಯವು ಕಸ್ದೀಯರ ದೇಶದ ಕೆಬಾರ್ ನದಿಯ ಬಳಿಯಲ್ಲಿ ಬೂಜಿಯ ಮಗನೂ ಯಾಜಕನೂ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು, ಕರ್ತನ ಕೈ ಅವನ ಮೇಲಿತ್ತು.
4ನಾನು ನೋಡಲಾಗಿ ಇಗೋ, ಉತ್ತರದಿಂದ ಸುಳಿಗಾಳಿ ಬಂದಿತು. ಒಂದು ಮಹಾ ಮೇಘವೂ ಝಗಝಗಿಸುವ ಬೆಂಕಿಯೂ ಅದರ ಸುತ್ತಲು ಪ್ರಕಾಶವೂ ಇತ್ತು; ಬೆಂಕಿಯ ಮಧ್ಯದಲ್ಲಿ ಥಳಥಳಿಸುವಂಥದ್ದು ಹೊಂಬಣ್ಣದ ಹಾಗಿತ್ತು.
5ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ರೂಪವು ಹೊರ ಟಿತು. ಅವುಗಳ ಆಕಾರವೇನಂದರೆ--ಅವುಗಳಿಗೆ ಮನುಷ್ಯನ ರೂಪವಿತ್ತು.
6ಪ್ರತಿಯೊಂದಕ್ಕೂ ನಾಲ್ಕು ಮುಖಗಳು ನಾಲ್ಕು ರೆಕ್ಕೆಗಳು ಇದ್ದವು.
7ಅವುಗಳ ಕಾಲುಗಳು ನೆಟ್ಟಗಿದ್ದವು; ಅವುಗಳ ಅಂಗಾಲು ಕರುವಿನ ಪಾದದ ಹಾಗಿದ್ದು ಹಿತ್ತಾಳೆಗೆ ಮೆರುಗು ಕೊಟ್ಟ ಬಣ್ಣದ ಹಾಗೆ ಅವು ಥಳಥಳಿಸುತ್ತಿದ್ದವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ