ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ಇಸ್ರಾಯೇಲ್ ಸಹಸ್ರ ಮುಖ್ಯಸ್ಥರಿಗೆ ಪ್ರತ್ಯುತ್ತರವಾಗಿ--
19ನಿಮ್ಮ ಸ್ವಾಸ್ತ್ಯದ ದೇಶವು ಅಶುದ್ಧ ವಾಗಿದ್ದರೆ ಕರ್ತನ ಗುಡಾರವಿರುವ ಕರ್ತನ ಸ್ವಾಸ್ತ್ಯದ ದೇಶಕ್ಕೆ ನೀವು ದಾಟಿ ಬಂದು ನಮ್ಮ ಮಧ್ಯದಲ್ಲಿ ಸ್ವಾಸ್ತ್ಯವನ್ನು ತೆಗೆದುಕೊಳ್ಳಿರಿ. ಕರ್ತನ ಬಲಿಪೀಠದ ಹೊರತಾಗಿ ನಿಮಗೋಸ್ಕರ ಒಂದು ಬಲಿಪೀಠವನ್ನು ಕಟ್ಟಿಕೊಳ್ಳುವದರಿಂದ ನೀವು ಕರ್ತನಿಗೂ ನಮಗೂ ವಿರೋಧವಾಗಿ ತಿರುಗಿಬೀಳಬೇಡಿರಿ;
20ಜೆರಹನ ಮಗನಾದ ಆಕಾನನು ಶಪಿಸಲ್ಪಟ್ಟದ್ದರಲ್ಲಿ ಅಪರಾಧಮಾಡಿದಾಗ ಈ ರೌದ್ರವು ಎಲ್ಲಾ ಸಭೆಯ ಮೇಲೆ ಬಿತ್ತಲ್ಲವೋ? ಅವನು ಮಾತ್ರ ತನ್ನ ಅಪರಾಧದಲ್ಲಿ ನಾಶವಾಗಲಿಲ್ಲ ಎಂದು ಹೇಳಿದರು.
21ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ಇಸ್ರಾಯೇಲ್ ಸಹಸ್ರ ಮುಖ್ಯಸ್ಥರಿಗೆ ಪ್ರತ್ಯುತ್ತರವಾಗಿ--
22ದೇವಾದಿ ದೇವರಾದ ಕರ್ತನೇ, ದೇವಾದಿ ದೇವರಾದ ಕರ್ತನೇ ತಿಳಿದಿದ್ದಾನೆ. ಇಸ್ರಾಯೇಲ್ಯರಿಗೂ ತಿಳಿಯುವದು. ಇದು ತಿರುಗಿ ಬೀಳುವದರಿಂದಲಾದರೂ ಕರ್ತನಿಗೆ ವಿರೋಧವಾಗಿ ಅಪರಾಧಮಾಡುವದರಿಂದಲಾದರೂ ಆಗಿದ್ದರೆ ನಮ್ಮನ್ನು ಈಹೊತ್ತು ರಕ್ಷಿಸಬಾರದು.
23ನಾವು ಕರ್ತನ ಕಡೆಗೆ ತಿರುಗಿಕೊಂಡು ದಹನಬಲಿಗಳ ನ್ನಾದರೂ ಆಹಾರ ಸಮರ್ಪಣೆಯನ್ನಾದರೂ ಸಮಾ ಧಾನದ ಬಲಿಗಳನ್ನಾದರೂ ಅದರ ಮೇಲೆ ಅರ್ಪಿಸುವ ದಕ್ಕೋಸ್ಕರ ಯಜ್ಞವೇದಿಯನ್ನು ನಮಗಾಗಿ ಕಟ್ಟಿದ್ದರೆ ಕರ್ತನು ಅದನ್ನು ವಿಚಾರಿಸಲಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ