೧ ಅರಸುಗಳು 7:23

ಇದಲ್ಲದೆ ಎರಕದ ಸಮುದ್ರವನ್ನು ಮಾಡಿದನು. ಅದು ದುಂಡಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳವೂ ಅದರ ಎತ್ತರ ಐದು ಮೊಳವೂ ಸುತ್ತಳತೆ ಮೂವತ್ತು ಮೊಳವೂ ಆಗಿತ್ತು. ಅದರ ಅಂಚಿನ ಕೆಳ ಭಾಗದಲ್ಲಿ ಅದರ ಸುತ್ತಲೂ ಮೊಗ್ಗುಗಳಿದ್ದವು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 7

21ಆ ಸ್ತಂಭಗಳನ್ನು ಮಂದಿರದ ದ್ವಾರಾಂಗಳದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್‌ ಎಂದೂ ಎಡಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಬೋವಜ್‌ ಎಂದೂ ಹೆಸರಿಟ್ಟನು.

22ಸ್ತಂಭಗಳ ತಲೆ ಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೆಲಸವು ಮುಗಿಯಿತು.

23ಇದಲ್ಲದೆ ಎರಕದ ಸಮುದ್ರವನ್ನು ಮಾಡಿದನು. ಅದು ದುಂಡಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳವೂ ಅದರ ಎತ್ತರ ಐದು ಮೊಳವೂ ಸುತ್ತಳತೆ ಮೂವತ್ತು ಮೊಳವೂ ಆಗಿತ್ತು. ಅದರ ಅಂಚಿನ ಕೆಳ ಭಾಗದಲ್ಲಿ ಅದರ ಸುತ್ತಲೂ ಮೊಗ್ಗುಗಳಿದ್ದವು.

24ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಈ ಸಮುದ್ರವು ಎರಕ ಹೊಯ್ಯಲ್ಪಡು ವಾಗ ಮೊಗ್ಗುಗಳು ಎರಡು ಸಾಲಾಗಿ ಎರಕ ಹೊಯ್ಯಲ್ಪ ಟ್ಟಿದ್ದವು.

25ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡುತ್ತಾ ಇದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು; ಅವುಗಳ ಹಿಂಭಾಗಗಳೆಲ್ಲಾ ಒಳಪಾರ್ಶ್ವದಲ್ಲಿ ಇದ್ದವು.

೧ ಅರಸುಗಳು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी