೧ ಅರಸುಗಳು 6:27

ಆ ಕೆರೂಬಿಗಳು ರೆಕ್ಕೆಗಳನ್ನು ಚಾಚಿರುವದರಿಂದ ಒಂದು ಕೆರೊಬಿಯ ರೆಕ್ಕೆಯು ಈ ಭಾಗದ ಗೋಡೆಯನ್ನೂ ಮತ್ತೊಂದು ಕೆರೂಬಿಯ ರೆಕ್ಕೆಯು ಆ ಭಾಗದ ಗೋಡೆಯನ್ನೂ ಮುಟ್ಟಿತು; ಮನೆಯ ಮಧ್ಯದಲ್ಲಿ ಒಂದರ ರೆಕ್ಕೆ ಮತ್ತೊಂದರ ರೆಕ್ಕೆಯನ್ನು ಮುಟ್ಟಿತು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 6

25ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವೂ ಹತ್ತು ಮೊಳವಾಗಿತ್ತು. ಎರಡು ಕೆರೂಬಿಗಳಿಗೆ ಒಂದೇ ಅಳ ತೆಯೂ ಒಂದೇ ಆಕಾರವಿತ್ತು.

26ಒಂದು ಕೆರೂಬಿಯು ಹತ್ತು ಮೊಳ ಎತ್ತರವಾಗಿತ್ತು: ಇನ್ನೊಂದು ಕೆರೂಬಿಯು ಅದರ ಹಾಗೆಯೇ ಇತ್ತು. ಆ ಕೆರೂಬಿಗಳನ್ನು ಒಳ ಮನೆಯೊಳಗೆ ಇಟ್ಟನು.

27ಆ ಕೆರೂಬಿಗಳು ರೆಕ್ಕೆಗಳನ್ನು ಚಾಚಿರುವದರಿಂದ ಒಂದು ಕೆರೊಬಿಯ ರೆಕ್ಕೆಯು ಈ ಭಾಗದ ಗೋಡೆಯನ್ನೂ ಮತ್ತೊಂದು ಕೆರೂಬಿಯ ರೆಕ್ಕೆಯು ಆ ಭಾಗದ ಗೋಡೆಯನ್ನೂ ಮುಟ್ಟಿತು; ಮನೆಯ ಮಧ್ಯದಲ್ಲಿ ಒಂದರ ರೆಕ್ಕೆ ಮತ್ತೊಂದರ ರೆಕ್ಕೆಯನ್ನು ಮುಟ್ಟಿತು.

28ಆ ಕೆರೂಬಿಗಳನ್ನು ಚಿನ್ನದಿಂದ ಹೊದಿಸಿದನು.

29ಮನೆಯ ಗೋಡೆಗಳನ್ನೆಲ್ಲಾ ಅವನು ಸುತ್ತಲೂ ಒಳ ಹೊರ ಭಾಗಗಳಲ್ಲಿ ಕೆರೂಬಿಗಳನ್ನೂ ಖರ್ಜೂರದ ಗಿಡಗಳನ್ನೂ ವಿಕಸಿಸಿದ ಪುಷ್ಪಗಳನ್ನೂ ಕೆತ್ತಿದ ಕೆಲಸದಿಂದ ಮಾಡಿಸಿದನು.

೧ ಅರಸುಗಳು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी