ವಿಮೋಚನಕಾಂಡ 14:6

ಆಗ ಅವನು ತನ್ನ ರಥವನ್ನು ಸಿದ್ಧಮಾಡಿ ಕೊಂಡು ತನ್ನ ಜನರೊಂದಿಗೆ ಹೊರಟನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 14

4ಇದಲ್ಲದೆ ಫರೋಹನು ಅವರನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು; ಫರೋಹನಲ್ಲಿಯೂ ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು; ಆಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿಯುವರು ಎಂದು ಹೇಳಿದನು. ಅವರು ಹಾಗೆಯೇ ಮಾಡಿದರು.

5ಜನರು ಓಡಿಹೋದರೆಂದು ಐಗುಪ್ತದ ಅರಸನಿಗೆ ತಿಳಿಸಲ್ಪಟ್ಟಿತು; ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಜನರಿಗೆ ವಿರೋಧವಾಗಿ ತಿರುಗಿಕೊಂಡಿತು; ಅವರು--ಇಸ್ರಾಯೇಲ್ಯರು ನಮ್ಮ ಸೇವೆಮಾಡುವದನ್ನು ಬಿಟ್ಟುಹೋಗಿಬಿಡುವಂತೆ ನಾವು ಯಾಕೆ ಮಾಡಿದೆವು ಅಂದರು.

6ಆಗ ಅವನು ತನ್ನ ರಥವನ್ನು ಸಿದ್ಧಮಾಡಿ ಕೊಂಡು ತನ್ನ ಜನರೊಂದಿಗೆ ಹೊರಟನು.

7ಇದಲ್ಲದೆ ಅವನು ಆರಿಸಿಕೊಂಡ ಆರು ನೂರು ರಥಗಳನ್ನೂ ಐಗುಪ್ತದ ಎಲ್ಲಾ ರಥಗಳನ್ನೂ ಅವುಗಳ ಮೇಲೆ ಅಧಿ ಪತಿಗಳನ್ನೂ ತೆಗೆದುಕೊಂಡು ಹೋದನು.

8ಐಗುಪ್ತದ ಅರಸನಾದ ಫರೋಹನ ಹೃದಯವನ್ನು ಕರ್ತನು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲ್‌ ಮಕ್ಕಳು ಧೈರ್ಯ ದಿಂದ ಹೊರಗೆ ಹೋದರು.

ವಿಮೋಚನಕಾಂಡ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी