ಆದರೆ ಪ್ರವಾದಿಗಳ ಮಕ್ಕಳಲ್ಲಿ ಒಬ್ಬನು ಕರ್ತನ ಮಾತಿನಿಂದ ತನ್ನ ಜೊತೆಗಾರನಿಗೆ--ನೀನು ದಯ ಮಾಡಿ ನನ್ನನ್ನು ಹೊಡೆ ಅಂದನು.
33ಈಗ ಆ ಮನುಷ್ಯರು ಅವನ ಮಾತಿನಲ್ಲಿ ಏನಾದರೂ ಬಂದೀತೆಂದು ಜಾಗ್ರೆತೆ ಯಿಂದ ನೋಡಿಕೊಂಡು ಅದನ್ನು ಅವಸರದಿಂದ ಹಿಡಿದರು. ಅವರು--ನಿನ್ನ ಸಹೋದರನಾದ ಬೆನ್ಹದ ದನು ಎಂದು ಹೇಳಿದರು. ಆಗ ಅವನು--ನೀವು ಹೋಗಿ ಅವನನ್ನು ಕರೆತನ್ನಿರಿ ಅಂದನು. ಬೆನ್ಹದದನು ಅವನ ಬಳಿಗೆ ಬಂದಾಗ ಅವನು ಇವನನ್ನು ರಥದ ಲ್ಲೇರ ಮಾಡಿದನು.
34ಬೆನ್ಹದದನು ಅವನಿಗೆ--ನನ್ನ ತಂದೆಯು ನಿನ್ನ ತಂದೆಯಿಂದ ತೆಗೆದುಕೊಂಡ ಪಟ್ಟಣ ಗಳನ್ನು ತಿರುಗಿ ಕೊಡುತ್ತೇನೆ; ನನ್ನ ತಂದೆ ಸಮಾರ್ಯ ದಲ್ಲಿ ಮಾಡಿದ ಹಾಗೆಯೇ ದಮಸ್ಕದಲ್ಲಿ ನೀನು ನಿನ ಗಾಗಿ ಬೀದಿಗಳನ್ನು ಮಾಡಿಸಬೇಕು ಅಂದನು. ಅದಕ್ಕ ವನು--ಈ ಒಡಂಬಡಿಕೆಯ ಪ್ರಕಾರವೇ ನಿನ್ನನ್ನು ಕಳು ಹಿಸಿ ಬಿಡುತ್ತೇನೆ ಅಂದನು. ಹೀಗೆಯೆ ಇವನು ಅವನ ಸಂಗಡ ಒಡಂಬಡಿಕೆಯನ್ನು ಮಾಡಿ ಅವನನ್ನು ಕಳುಹಿಸಿ ಬಿಟ್ಟನು.
35ಆದರೆ ಪ್ರವಾದಿಗಳ ಮಕ್ಕಳಲ್ಲಿ ಒಬ್ಬನು ಕರ್ತನ ಮಾತಿನಿಂದ ತನ್ನ ಜೊತೆಗಾರನಿಗೆ--ನೀನು ದಯ ಮಾಡಿ ನನ್ನನ್ನು ಹೊಡೆ ಅಂದನು.
36ಆದರೆ ಆ ಮನುಷ್ಯನು ಅವನನ್ನು ಹೊಡೆಯಲ್ಲೊಲ್ಲದೆ ಇದ್ದನು. ಆಗ ಅವನು ಇವನಿಗೆ--ನೀನು ಕರ್ತನ ಮಾತಿಗೆ ಅವಿಧೇಯನಾದದರಿಂದ ಇಗೋ, ನೀನು ನನ್ನನ್ನು ಬಿಟ್ಟು ಹೋಗುವಾಗ ಸಿಂಹವು ನಿನ್ನನ್ನು ಕೊಲ್ಲು ವದು ಅಂದನು. ಅವನು ಇವನನ್ನು ಬಿಟ್ಟು ಹೋದಾ ಗಲೆ ಸಿಂಹವು ಅವನನ್ನು ಕಂಡು ಕೊಂದುಹಾಕಿತು.
37ಅವನು ಮತ್ತೊಬ್ಬನನ್ನು ಕಂಡುಕೊಂಡು--ದಯ ಮಾಡಿ ನನ್ನನ್ನು ಹೊಡೆ ಅಂದನು. ಆ ಮನುಷ್ಯನು ಅವನನ್ನು ಗಾಯವಾಗುವ ಹಾಗೆ ಹೊಡೆದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ