ಕರ್ತನೇ, ದೇವರುಗಳಲ್ಲಿ ನಿನ್ನ ಹಾಗೆ ಒಬ್ಬನೂ ಇಲ್ಲ; ನಿನ್ನ ಕೆಲಸಗಳ ಹಾಗೆ ಒಂದೂ ಇಲ್ಲ.
6ಓ ಕರ್ತನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸು.
7ನನ್ನ ಇಕ್ಕಟ್ಟಿನ ದಿವಸದಲ್ಲಿ ನಿನ್ನನ್ನು ಕರೆಯುವೆನು; ನೀನು ನನಗೆ ಉತ್ತರ ಕೊಡುವಿ.
8ಕರ್ತನೇ, ದೇವರುಗಳಲ್ಲಿ ನಿನ್ನ ಹಾಗೆ ಒಬ್ಬನೂ ಇಲ್ಲ; ನಿನ್ನ ಕೆಲಸಗಳ ಹಾಗೆ ಒಂದೂ ಇಲ್ಲ.
9ಓ ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು.
10ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ