ಯೆಹೋಶುವ 22:15

ಇವರು ಗಿಲ್ಯಾದ್‌ ದೇಶದಲ್ಲಿ ರೂಬೇನನ ಮಕ್ಕಳ ಬಳಿಗೂ ಗಾದನ ಮಕ್ಕಳ ಬಳಿಗೂ ಮನಸ್ಸೆಯ ಅರ್ಧ ಗೋತ್ರದವರ ಬಳಿಗೂ ಬಂದು ಅವರ ಸಂಗಡ ಮಾತನಾಡಿ

ಸಂದರ್ಭದೊಂದಿಗೆ ಓದಿ · ಯೆಹೋಶುವ 22

13ಗಿಲ್ಯಾದ್‌ ದೇಶದಲ್ಲಿರುವ ರೂಬೇನನ ಮಕ್ಕಳ ಬಳಿಗೂ ಗಾದನ ಮಕ್ಕಳ ಬಳಿಗೂ ಮನಸ್ಸೆಯ ಅರ್ಧ ಗೋತ್ರದವರ ಬಳಿಗೂ ಯಾಜಕನಾದ ಎಲಿಯಾ ಜರನ ಮಗನಾದ ಫಿನೇಹಾಸನನ್ನೂ

14ಅವನ ಸಂಗಡ ಇಸ್ರಾಯೇಲಿನ ಎಲ್ಲಾ ಗೋತ್ರಗಳ ಪ್ರತಿ ತಂದೆ ಮನೆಯ ಮುಖ್ಯಸ್ಥನ ಪ್ರಕಾರ ಹತ್ತುಮಂದಿ ಪ್ರಧಾನ ರನ್ನೂ ಕಳುಹಿಸಿದರು. ಇವರಲ್ಲಿ ಪ್ರತಿ ಮನುಷ್ಯನು ಇಸ್ರಾಯೇಲ್‌ ಸಹಸ್ರಗಳಲ್ಲಿ ತನ್ನ ತನ್ನ ತಂದೆಯ ಮನೆಗೆ ಮುಖ್ಯಸ್ಥನಾಗಿದ್ದನು.

15ಇವರು ಗಿಲ್ಯಾದ್‌ ದೇಶದಲ್ಲಿ ರೂಬೇನನ ಮಕ್ಕಳ ಬಳಿಗೂ ಗಾದನ ಮಕ್ಕಳ ಬಳಿಗೂ ಮನಸ್ಸೆಯ ಅರ್ಧ ಗೋತ್ರದವರ ಬಳಿಗೂ ಬಂದು ಅವರ ಸಂಗಡ ಮಾತನಾಡಿ

16ಕರ್ತನ ಸಭೆಯೆಲ್ಲಾ ಹೇಳುವದೇನಂದರೆ, ನೀವು ಈ ಹೊತ್ತು ಕರ್ತನ ಕಡೆಗೆ ತಿರುಗದೆ ಆತನಿಗೆ ವಿರೋಧವಾಗಿ ತಿರುಗಿ ಬೀಳುವ ಹಾಗೆ ನಿಮಗೆ ಒಂದು ಯಜ್ಞವೇದಿ ಯನ್ನು ಕಟ್ಟಿಕೊಂಡು ಇಸ್ರಾಯೇಲ್‌ ದೇವರಿಗೆ ಮಾಡಿದ ಈ ಅಪರಾಧವೇನು?

17ಪೆಗೋರದಲ್ಲಿ ಆದ ದುಷ್ಟ ತನವು ನಮಗೆ ಅಲ್ಪವೋ? ಕರ್ತನ ಸಭೆಯ ಮೇಲೆ ವ್ಯಾಧಿ ಬಂದಾಗ್ಯೂ ಈ ದಿನದ ವರೆಗೂ ಅದರಿಂದ ನಾವು ಶುದ್ಧವಾಗಲಿಲ್ಲ.

ಯೆಹೋಶುವ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी