ಫಿಲಿಪ್ಪಿಯವರಿಗೆ 4:10

ಈಗಲಾದರೋ ನನ್ನ ವಿಷಯವಾದ ನಿಮ್ಮ ಯೋಚನೆಯು ನಿಮ್ಮಲ್ಲಿ ಪುನಃ ಚಿಗುರಿದ್ದಕ್ಕೆ ನಾನು ಕರ್ತನಲ್ಲಿ ಬಹಳವಾಗಿ ಸಂತೋಷಪಟ್ಟೆನು. ಈ ವಿಷಯ ದಲ್ಲಿ ನೀವು ಯೋಚನೆಯುಳ್ಳವರಾಗಿದ್ದರೂ ನಿಮಗೆ ಸಂದರ್ಭ ಸಿಕ್ಕಲಿಲ್ಲವೇನೋ.

ಸಂದರ್ಭದೊಂದಿಗೆ ಓದಿ · ಫಿಲಿಪ್ಪಿಯವರಿಗೆ 4

8ಕಡೇದಾಗಿ ಸಹೋದರರೇ, ಸತ್ಯವಾದವುಗಳು ಯಾವವೋ ಪ್ರಾಮಾಣಿಕವಾದವುಗಳು ಯಾವವೋ ನ್ಯಾಯವಾದವುಗಳು ಯಾವವೋ ಶುದ್ಧವಾದವುಗಳು ಯಾವವೋ ಪ್ರೀತಿಕರವಾದವುಗಳು ಯಾವವೋ ಮಾನ್ಯವಾದವುಗಳು ಯಾವವೋ ಅವುಗಳನ್ನು ಮತ್ತು ಸದ್ಗುಣವನ್ನೂ ಸ್ತುತ್ಯವಾದದ್ದನ್ನೂ ಯೊ

9ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ ಮತ್ತು ಯಾವದನ್ನು ನನ್ನಲ್ಲಿ ಕೇಳಿಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ. ಆಗ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.

10ಈಗಲಾದರೋ ನನ್ನ ವಿಷಯವಾದ ನಿಮ್ಮ ಯೋಚನೆಯು ನಿಮ್ಮಲ್ಲಿ ಪುನಃ ಚಿಗುರಿದ್ದಕ್ಕೆ ನಾನು ಕರ್ತನಲ್ಲಿ ಬಹಳವಾಗಿ ಸಂತೋಷಪಟ್ಟೆನು. ಈ ವಿಷಯ ದಲ್ಲಿ ನೀವು ಯೋಚನೆಯುಳ್ಳವರಾಗಿದ್ದರೂ ನಿಮಗೆ ಸಂದರ್ಭ ಸಿಕ್ಕಲಿಲ್ಲವೇನೋ.

11ಕೊರತೆಯಲ್ಲಿದ್ದೇ ನೆಂದು ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತು ಕೊಂಡಿದ್ದೇನೆ.

12ನಾನು ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು, ನಾನು ತೃಪ್ತನಾಗಿ ದ್ದರೂ ಹಸಿದವನಾಗಿದ್ದರೂ ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲಿರುವವನಾದರೂ ಅವೆಲ್ಲವುಗಳನ್ನು ನಾನು ಕಲಿತು ಕೊಂಡಿದ್ದೇನೆ.

ಫಿಲಿಪ್ಪಿಯವರಿಗೆ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी