೨ ಕೊರಿಂಥದವರಿಗೆ 12:17

ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾವನ ಮೂಲಕವಾಗಿಯಾಗಲಿ ನಿಮ್ಮಿಂದ ನಾನು ಲಾಭ ಪಡೆದುಕೊಂಡೆನೋ?

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 12

15ನಾನಂತೂ ನನಗಿರುವದನ್ನು ನಿಮಗೋಸ್ಕರ ಅತಿ ಸಂತೋಷದಿಂದ ವೆಚ್ಚಮಾಡುತ್ತೇನೆ, ನನ್ನನ್ನೇ ವೆಚ್ಚ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುತ್ತೀರಿ.

16ಅದಿರಲಿ, ನಾನು ನಿಮಗೆ ಭಾರವಿಲ್ಲದ ವನಾಗಿದ್ದಾಗ್ಯೂ ಯುಕ್ತಿಯುಳ್ಳವನಾಗಿ ನಾನು ನಿಮ್ಮನ್ನು ಉಪಾಯದಿಂದ ಹಿಡಿದೆನು.

17ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾವನ ಮೂಲಕವಾಗಿಯಾಗಲಿ ನಿಮ್ಮಿಂದ ನಾನು ಲಾಭ ಪಡೆದುಕೊಂಡೆನೋ?

18ನಾನು ತೀತನನ್ನು ಅಪೇಕ್ಷಿಸಿ ಅವನ ಜೊತೆಯಲ್ಲಿ ಒಬ್ಬ ಸಹೋದರನನ್ನು ಕಳುಹಿಸಿಕೊಟ್ಟೆನು; ತೀತನು ನಿಮ್ಮಿಂದ ಏನಾದರೂ ಲಾಭವನ್ನು ಪಡೆದು ಕೊಂಡನೋ? ನಾವಿಬ್ಬರೂ ಒಂದೇ ಆತ್ಮನಿಂದ ನಡೆಯಲಿಲ್ಲವೋ? ನಾವು ಒಂದೇ ತರವಾದ ಹೆಜ್ಜೆ ಜಾಡಿನಲ್ಲಿ ನಡೆಯಲಿಲ್ಲವೋ?

19ನಾವು ತಪ್ಪಿಲ್ಲದವರೆಂದು ನಿಮಗೆ ಹೇಳುತ್ತೇ ವೆಂದು ನೆನಸುತ್ತೀರೋ? ದೇವರ ಸನ್ನಿಧಾನದಲ್ಲಿಯೇ ನಾವು ಕ್ರಿಸ್ತನಲ್ಲಿದ್ದು ಮಾತನಾಡುವವರಾಗಿದ್ದೇವೆ. ಅತಿ ಪ್ರಿಯರೇ, ನಾವು ಮಾಡುವದನ್ನೆಲ್ಲಾ ನಿಮ್ಮ ಭಕ್ತಿವೃದ್ದಿಗೋಸ್ಕರವೇ ಮಾಡುತ್ತೇವೆ.

೨ ಕೊರಿಂಥದವರಿಗೆ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी