೧ ಅರಸುಗಳು 19:12

ಭೂಕಂಪದ ತರುವಾಯ ಬೆಂಕಿಯು; ಆ ಬೆಂಕಿಯಲ್ಲಿ ಕರ್ತನು ಇರಲಿಲ್ಲ. ಬೆಂಕಿಯ ತರು ವಾಯ ಮೆಲ್ಲನೆಯಾದಂಥ, ಸೂಕ್ಷ್ಮವಾದಂಥ ಶಬ್ದವು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 19

10ಅದಕ್ಕವನು--ಸೈನ್ಯಗಳ ದೇವ ರಾದ ಕರ್ತನಿಗೋಸ್ಕರ ನಾನು ಬಹು ರೋಷವುಳ್ಳವ ನಾಗಿದ್ದೇನೆ; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿ ಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನು ಹೌದು, ನಾನೊಬ್ಬನೇ ಉಳಿದಿ ದ್ದೇನೆ; ಆದರೆ ಅವರು ನನ್ನ ಪ್ರಾಣವನ್ನು ತೆಗೆದುಬಿಡಲು ಹುಡುಕುತ್ತಾರೆ ಅಂದನು.

11ಆಗ ಆತನು--ನೀನು ಹೊರಗೆ ಬಂದು ಬೆಟ್ಟದ ಮೇಲೆ ಕರ್ತನ ಮುಂದೆ ನಿಲ್ಲು ಅಂದನು. ಇಗೋ, ಕರ್ತನು ಹಾದುಹೋದನು; ಕರ್ತನ ಮುಂದೆ ಬೆಟ್ಟಗಳನ್ನು ಭೇದಿಸುವಂಥ, ಗುಡ್ಡ ಗಳನ್ನು ಒಡೆಯುವಂಥ ಮಹಾ ಬಲವಾದ ಗಾಳಿ; ಆ ಗಾಳಿಯಲ್ಲಿ ಕರ್ತನು ಇರಲಿಲ್ಲ. ಗಾಳಿಯ ತರು ವಾಯ ಭೂಕಂಪವು; ಆ ಭೂಕಂಪದಲ್ಲಿ ಕರ್ತನು ಇರಲಿಲ್ಲ.

12ಭೂಕಂಪದ ತರುವಾಯ ಬೆಂಕಿಯು; ಆ ಬೆಂಕಿಯಲ್ಲಿ ಕರ್ತನು ಇರಲಿಲ್ಲ. ಬೆಂಕಿಯ ತರು ವಾಯ ಮೆಲ್ಲನೆಯಾದಂಥ, ಸೂಕ್ಷ್ಮವಾದಂಥ ಶಬ್ದವು.

13ಎಲೀಯನು ಅದನ್ನು ಕೇಳಿದಾಗ ತನ್ನ ಕಂಬಳಿ ಯಿಂದ ತನ್ನ ಮುಖವನ್ನು ಮುಚ್ಚಿಕೊಂಡು ಹೊರಗೆ ಬಂದು ಗವಿಯ ದ್ವಾರದಲ್ಲಿ ನಿಂತನು. ಆಗ ಇಗೋಎಲೀಯನೇ, ಇಲ್ಲಿ ಏನು ಮಾಡುತ್ತೀ ಎಂಬ ಶಬ್ದವು ಅವನಿಗೆ ಉಂಟಾಯಿತು.

14ಅದಕ್ಕೆ ಅವನು--ಸೈನ್ಯಗಳ ದೇವರಾದ ಕರ್ತನಿಗೋಸ್ಕರ ನಾನು ಮಹಾ ರೋಷವು ಳ್ಳವನಾಗಿದ್ದೆನು; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನೊಬ್ಬನೇ ಉಳಿದಿದ್ದೇನೆ; ಅವರು ನನ್ನ ಪ್ರಾಣವನ್ನು ತೆಗೆಯಲು ಹುಡುಕುತ್ತಾರೆ ಅಂದನು.

೧ ಅರಸುಗಳು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी