ಆದಿಕಾಂಡ 12:17

ಆದರೆ ಕರ್ತನು ಫರೋಹನನ್ನೂ ಅವನ ಮನೆ ಯನ್ನೂ ಅಬ್ರಾಮನ ಹೆಂಡತಿಯಾದ ಸಾರಯಳಿಗಾಗಿ ಮಹಾಬಾಧೆಗಳಿಂದ ಬಾಧಿಸಿದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 12

15ಫರೋಹನ ಪ್ರಧಾ ನರು ಸಹ ಆಕೆಯನ್ನು ನೋಡಿ ಫರೋಹನ ಮುಂದೆ ಆಕೆಯನ್ನು ಹೊಗಳಲಾಗಿ ಆ ಸ್ತ್ರೀಯು ಫರೋಹನ ಮನೆಗೆ ಒಯ್ಯಲ್ಪಟ್ಟಳು.

16ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೇದನ್ನು ಮಾಡಿದನು. ಅವನಿಗೆ ಕುರಿಗಳೂ ಎತ್ತುಗಳೂ ಕತ್ತೆಗಳೂ ದಾಸರೂ ದಾಸಿ ಯರೂ ಹೆಣ್ಣುಕತ್ತೆಗಳೂ ಒಂಟೆಗಳೂ ದೊರೆತವು.

17ಆದರೆ ಕರ್ತನು ಫರೋಹನನ್ನೂ ಅವನ ಮನೆ ಯನ್ನೂ ಅಬ್ರಾಮನ ಹೆಂಡತಿಯಾದ ಸಾರಯಳಿಗಾಗಿ ಮಹಾಬಾಧೆಗಳಿಂದ ಬಾಧಿಸಿದನು.

18ಆಗ ಫರೋ ಹನು ಅಬ್ರಾಮನನ್ನು ಕರೆಯಿಸಿ--ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿಯೆಂದು ಯಾಕೆ ತಿಳಿಸಲಿಲ್ಲ?

19ನೀನು--ಆಕೆಯು ನನ್ನ ಸಹೋ ದರಿ ಎಂದು ಯಾಕೆ ಹೇಳಿದೆ? ನೀನು ಹಾಗೆ ಹೇಳಿದ್ದರಿಂದ ಆಕೆಯನ್ನು ನನಗೆ ಹೆಂಡತಿಯಾಗಿ ಇಟ್ಟುಕೊಳ್ಳುವದಕ್ಕಿದ್ದೆನು. ಆದರೆ ಈಗ ಇಗೋ, ನಿನ್ನ ಹೆಂಡತಿ; ಆಕೆಯನ್ನು ತೆಗೆದುಕೊಂಡು ಹೋಗು ಅಂದನು.

ಆದಿಕಾಂಡ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी