ಓಬದ್ಯ 1:3

ನೀನು ಬಹಳವಾಗಿ ತಿರಸ್ಕರಿಸಲ್ಪಟ್ಟಿದ್ದೀ. ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸ ಮಾಡಿಕೊಂಡವನೇ--ಯಾರು ನನ್ನನ್ನು ನೆಲಕ್ಕೆ ಇಳಿಸ ಬಲ್ಲರೆಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ.

ಸಂದರ್ಭದೊಂದಿಗೆ ಓದಿ · ಓಬದ್ಯ 1

1ಓಬದ್ಯನ ದರ್ಶನವು. ಕರ್ತನಾದ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾನೆ--ಕರ್ತನಿಂದ ಸುದ್ಧಿಯನ್ನು ಕೇಳಿದ್ದೇವೆ; ಅನ್ಯಜನಾಂಗಗಳಲ್ಲಿ ರಾಯ ಭಾರಿಯು ಕಳುಹಿಸಲ್ಪಟ್ಟಿದ್ದಾನೆ; ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಏಳುವ!

2ಇಗೋ, ನಿನ್ನನ್ನು ಅನ್ಯಜನಾಂಗಗಳಲ್ಲಿ ಹೀನವಾಗಿ ಮಾಡಿದ್ದೇನೆ.

3ನೀನು ಬಹಳವಾಗಿ ತಿರಸ್ಕರಿಸಲ್ಪಟ್ಟಿದ್ದೀ. ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸ ಮಾಡಿಕೊಂಡವನೇ--ಯಾರು ನನ್ನನ್ನು ನೆಲಕ್ಕೆ ಇಳಿಸ ಬಲ್ಲರೆಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ.

4ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನೆಂದು ಕರ್ತನು ಅನ್ನುತ್ತಾನೆ.

5ಕಳ್ಳರು ನಿನ್ನ ಬಳಿಗೆ ಬಂದಿದ್ದರೆ ಸುಲುಕೊಳ್ಳುವವರು ರಾತ್ರಿಯಲ್ಲಿ ಬಂದಿದ್ದರೆ ಎಷ್ಟೋ ಹಾಳಾಗುತ್ತಿದ್ದಿಯಲ್ಲಾ! ಅವರು ತಮಗೆ ಸಾಕಾಗುವಷ್ಟು ಕದ್ದುಕೊಳ್ಳುವರಲ್ಲವೋ? ದ್ರಾಕ್ಷೇಹಣ್ಣನ್ನು ಕೂಡಿಸುವ ವರು ನಿನ್ನ ಬಳಿಗೆ ಬಂದಿದ್ದರೆ ಅವರು ಕೆಲವು ದ್ರಾಕ್ಷೇ ಹಣ್ಣನ್ನು ಬಿಡುವರಲ್ಲವೋ?

ಓಬದ್ಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी