ಆದರೆ ಇಸ್ರಾಯೇಲ್ಯರು ಐಗುಪ್ತದೇಶದ ಗೋಷೆನ್ ಸೀಮೆಯಲ್ಲಿ ವಾಸವಾಗಿದ್ದು ಆಸ್ತಿಯನ್ನು ಸಂಪಾದಿಸಿ ಬೆಳೆದು ಬಹಳವಾಗಿ ಹೆಚ್ಚಿದ್ದರು.
25ಆಗ ಅವರು--ನೀನೇ ನಮ್ಮನ್ನು ಬದುಕಿಸಿದ್ದೀ, ನಮ್ಮ ಒಡೆಯನ ಕಣ್ಣುಗಳ ಮುಂದೆ ನಮಗೆ ಕೃಪೆ ದೊರಕಲಿ. ನಾವು ಫರೋಹನ ದಾಸರಾಗಿರುವೆವು ಅಂದರು.
26ಹೀಗೆ ಯೋಸೇಫನು ಫರೋಹನಿಗೆ ಐದನೆಯ ಪಾಲು ಆಗಬೇಕೆಂಬದನ್ನು ಐಗುಪ್ತದ ಭೂಮಿಗೆ ಇಂದಿನ ವರೆಗೂ ನೇಮಕಮಾಡಿ ಸ್ಥಾಪಿಸಿ ದನು. ವೈದಿಕರ ಭೂಮಿಯು ಮಾತ್ರ ಫರೋಹ ನದಾಗಲಿಲ್ಲ.
27ಆದರೆ ಇಸ್ರಾಯೇಲ್ಯರು ಐಗುಪ್ತದೇಶದ ಗೋಷೆನ್ ಸೀಮೆಯಲ್ಲಿ ವಾಸವಾಗಿದ್ದು ಆಸ್ತಿಯನ್ನು ಸಂಪಾದಿಸಿ ಬೆಳೆದು ಬಹಳವಾಗಿ ಹೆಚ್ಚಿದ್ದರು.
28ಇದಲ್ಲದೆ ಯಾಕೋಬನು ಐಗುಪ್ತದೇಶದಲ್ಲಿ ಹದಿನೇಳು ವರುಷ ಬದುಕಿದನು. ಯಾಕೋಬನು ಬದುಕಿದ ದಿನಗಳು ನೂರ ನಾಲ್ವತ್ತೇಳು ವರುಷಗಳು.
29ಇಸ್ರಾಯೇಲನು ಸಾಯುವ ಸಮಯವು ಸವಿಾಪಿಸಿ ದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರೆಯಿಸಿ ಅವನಿಗೆ--ಈಗ ನಿನ್ನ ಸಮ್ಮುಖದಲ್ಲಿ ನಾನು ಕೃಪೆ ಹೊಂದಿದ್ದೇಯಾದರೆ ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು ನನ್ನ ಕಡೆಗೆ ದಯೆಯನ್ನೂ ಸತ್ಯವನ್ನೂ ತೋರಿಸು. ಹೇಗಂದರೆ ಐಗುಪ್ತದಲ್ಲಿ ನನ್ನನ್ನು ಹೂಣಿಡಬೇಡ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ