ಅಪೊಸ್ತಲರ ಕೃತ್ಯಗಳು 3:13

ಅಬ್ರಹಾಮ ಇಸಾಕ ಯಾಕೋಬರ ದೇವರು, ನಮ್ಮ ಪಿತೃಗಳ ದೇವರು, ತನ್ನ ಮಗನಾದ ಯೇಸುವನ್ನು ಮಹಿಮೆ ಪಡಿಸಿದ್ದಾನೆ; ನೀವಾದರೋ ಆತನನ್ನು ಒಪ್ಪಿಸಿಕೊಟ್ಟಿರಿ; ಪಿಲಾತನು ಆತನನ್ನು ಬಿಟ್ಟುಬಿಡಬೇಕೆಂದು ನಿರ್ಣಯಿಸಿ ದಾಗ ನೀವು ಆತನನ್ನು ಅವನ ಮುಂದೆ ಅಲ್ಲಗಳೆದಿರಿ.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 3

11ಸ್ವಸ್ಥನಾದ ಆ ಕುಂಟನು ಪೇತ್ರನನ್ನೂ ಯೋಹಾನ ನನ್ನೂ ಅಂಟಿಕೊಂಡಿದ್ದಾಗ ಜನರೆಲ್ಲರೂ ಕೂಡಿ ಅವರ ಬಳಿಗೆ ಅತ್ಯಾಶ್ಚರ್ಯದಿಂದ ಸೊಲೊಮೋನನದೆಂದು ಕರೆಯಲ್ಪಟ್ಟ ದ್ವಾರಾಂಗಳದೊಳಕ್ಕೆ ಓಡಿ ಬಂದರು.

12ಪೇತ್ರನು ಇದನ್ನು ನೋಡಿ ಜನರಿಗೆ--ಇಸ್ರಾ ಯೇಲ್‌ ಜನರೇ, ನೀವು ಯಾಕೆ ಇದಕ್ಕೆ ಆಶ್ಚರ್ಯ ಪಡುತ್ತೀರಿ? ಇಲ್ಲವೆ ನಮ್ಮ ಸ್ವಂತ ಶಕ್ತಿಯಿಂದಾಗಲಿ ಪರಿಶುದ್ಧತೆಯಿಂದಾಗಲಿ ಈ ಮನುಷ್ಯನನ್ನು ನಡೆಯು ವಂತೆ ಮಾಡಿದೆವೋ ಎಂಬಂತೆ ನಮ್ಮ ಮೇಲೆ ಯಾಕೆ ನೀವು ದೃಷ್ಟಿ ಇಟ್ಟು ನೋಡುತ್ತೀರಿ?

13ಅಬ್ರಹಾಮ ಇಸಾಕ ಯಾಕೋಬರ ದೇವರು, ನಮ್ಮ ಪಿತೃಗಳ ದೇವರು, ತನ್ನ ಮಗನಾದ ಯೇಸುವನ್ನು ಮಹಿಮೆ ಪಡಿಸಿದ್ದಾನೆ; ನೀವಾದರೋ ಆತನನ್ನು ಒಪ್ಪಿಸಿಕೊಟ್ಟಿರಿ; ಪಿಲಾತನು ಆತನನ್ನು ಬಿಟ್ಟುಬಿಡಬೇಕೆಂದು ನಿರ್ಣಯಿಸಿ ದಾಗ ನೀವು ಆತನನ್ನು ಅವನ ಮುಂದೆ ಅಲ್ಲಗಳೆದಿರಿ.

14ಹೀಗೆ ಪರಿಶುದ್ಧನೂ ನೀತಿವಂತನೂ ಆಗಿರುವಾತ ನನ್ನು ನೀವು ಬೇಡವೆಂದು ಹೇಳಿ ಒಬ್ಬ ಕೊಲೆಗಾರನನ್ನು ನಿಮಗಾಗಿ ಬಿಟ್ಟುಕೊಡುವಂತೆ ಅಪೇಕ್ಷಿಸಿ

15ಜೀವಾಧಿ ಪತಿಯನ್ನು ಕೊಲ್ಲಿಸಿದಿರಿ; ದೇವರು ಆತನನ್ನೇ ಸತ್ತವ ರೊಳಗಿಂದ ಎಬ್ಬಿಸಿದ್ದಾನೆ; ಇದಕ್ಕೆ ನಾವು ಸಾಕ್ಷಿಗಳಾ ಗಿದ್ದೇವೆ.

ಅಪೊಸ್ತಲರ ಕೃತ್ಯಗಳು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी