ದೇವರ ಆಲಯದ ಗೊಡವೆಯನ್ನು ನೀವು ಬಿಡಿರಿ. ಯೆಹೂದ್ಯರ ಅಧಿಪತಿಯೂ ಯೆಹೂದ್ಯರ ಹಿರಿಯರೂ ಅದರ ಸ್ಥಳದಲ್ಲಿ ದೇವರ ಆಲಯವನ್ನು ಕಟ್ಟಿಸಲಿ.
5ಅದರ ಖರ್ಚು ಅರಮನೆ ಯಿಂದ ಕೊಡಲ್ಪಡಲಿ. ಇದಲ್ಲದೆ ನೆಬೂಕದ್ನೇಚ್ಚರನು ಯೆರೂಸಲೇಮಿನಲ್ಲಿರುವ ಮಂದಿರದಿಂದ ತೆಗೆದು ಕೊಂಡು ಬಾಬೆಲಿಗೆ ಒಯ್ದು ದೇವರ ಆಲಯದ ಬೆಳ್ಳಿ ಬಂಗಾರದ ಸಾಮಾನುಗಳನ್ನು ತಿರಿಗಿ ಯೆರೂಸಲೇಮಿನಲ್ಲಿರುವ ಮಂದಿರಕ್ಕೆ ತಕ್ಕೊಂಡು ಹೋಗಿ ದೇವರ ಆಲಯದೊಳಗೆ ಅದರದರ ಸ್ಥಳದಲ್ಲಿ ಇರಿಸಲಿ ಎಂಬದೇ.
6ಆದಕಾರಣ ನದಿಯ ಆಚೆಯಲ್ಲಿರುವ ಅಧಿಪತಿ ಯಾದ ತತ್ತೆನೈಯನೇ, ಶೆತರ್ಬೋಜೆನೈಯೇ, ನದಿಯ ಆಚೆಯಲ್ಲಿರುವ ಅಪರ್ಸತ್ಕಾಯರಾದ ನಿಮ್ಮ ಜೊತೆ ಗಾರರು ಸಹ ಆ ಸ್ಥಳವನ್ನು ಬಿಟ್ಟು ದೂರವಾಗಿರ್ರಿ.
7ದೇವರ ಆಲಯದ ಗೊಡವೆಯನ್ನು ನೀವು ಬಿಡಿರಿ. ಯೆಹೂದ್ಯರ ಅಧಿಪತಿಯೂ ಯೆಹೂದ್ಯರ ಹಿರಿಯರೂ ಅದರ ಸ್ಥಳದಲ್ಲಿ ದೇವರ ಆಲಯವನ್ನು ಕಟ್ಟಿಸಲಿ.
8ಇದಲ್ಲದೆ ದೇವರ ಈ ಆಲಯವನ್ನು ಕಟ್ಟುವದಕ್ಕೆ ಯೆಹೂದ್ಯರ ಹಿರಿಯರಿಗೆ ನೀವು ಮಾಡತಕ್ಕದ್ದನ್ನು ಕುರಿತು ನಾನು ಕೊಡುವ ಅಪ್ಪಣೆ ಏನಂದರೆ--ಅವರು ಅಭ್ಯಂತರ ಮಾಡಲ್ಪಡದ ಹಾಗೆ ನದಿಯ ಆಚೆಯಲ್ಲಿಂದ ಬರುವ ಅರಸನ ಕಪ್ಪದಿಂದಲೇ ಈ ಮನುಷ್ಯರಿಗೆ ಖರ್ಚು ಕೊಡಲ್ಪಡಲಿ.
9ಇದಲ್ಲದೆ ಅವರು ಪರ ಲೋಕದ ದೇವರಿಗೆ ಸುವಾಸನೆಯುಳ್ಳ ಬಲಿಗಳನ್ನು ಅರ್ಪಿಸುವ ಹಾಗೆಯೂ ಅರಸನ ಪ್ರಾಣಕ್ಕೋಸ್ಕರವೂ ಅವನ ಮಕ್ಕಳ ಪ್ರಾಣಕ್ಕೋಸ್ಕರವೂ ಪ್ರಾರ್ಥನೆ ಮಾಡುವ ಹಾಗೆಯೂ ಪರಲೋಕದ ದೇವರಿಗೆ ದಹನಬಲಿಗಳ ನಿಮಿತ್ತ
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ