ಜೆಕರ್ಯ 12:9

ಆ ದಿನದಲ್ಲಿ ಆಗುವದೇ ನಂದರೆ, ಯೆರೂಸಲೇಮಿಗೆ ವಿರೋಧವಾಗಿ ಬರುವ ಜನಾಂಗಗಳನ್ನೆಲ್ಲಾ ನಾಶ ಮಾಡುವದಕ್ಕೆ ನಾನು ಹುಡುಕುವೆನು.

ಸಂದರ್ಭದೊಂದಿಗೆ ಓದಿ · ಜೆಕರ್ಯ 12

7ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು.

8ಆ ದಿನದಲ್ಲಿ ಕರ್ತನು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವನು; ಆ ದಿನದಲ್ಲಿ ಅವರೊಳಗೆ ಬಲಹೀನನು ದಾವೀದನ ಹಾಗೆಯೂ ದಾವೀದನ ಮನೆತನದವರು ದೇವರ ಹಾಗೆಯೂ ಅಂದರೆ ಅವರ ಮುಂದೆ ಕರ್ತನ ದೂತನ ಹಾಗೆಯೂ ಇರುವರು.

9ಆ ದಿನದಲ್ಲಿ ಆಗುವದೇ ನಂದರೆ, ಯೆರೂಸಲೇಮಿಗೆ ವಿರೋಧವಾಗಿ ಬರುವ ಜನಾಂಗಗಳನ್ನೆಲ್ಲಾ ನಾಶ ಮಾಡುವದಕ್ಕೆ ನಾನು ಹುಡುಕುವೆನು.

10ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು.

11ಮೆಗಿದ್ದೋವಿನ ತಗ್ಗಿನಲ್ಲಾದ ಹದದ್‌ ರಿಮ್ಮೊನಿನ ಗೋಳಾಟದ ಹಾಗೆ ಆ ದಿನ ದಲ್ಲಿ ಯೆರೂಸಲೇಮಿನೊಳಗೆ ಮಹಾಗೋಳಾಟವಿ ರುವದು.

ಜೆಕರ್ಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी