ಯೆರೆಮಿಯ 18:19

ಓ ಕರ್ತನೇ, ನನ್ನನ್ನು ಆಲೈಸು; ನನ್ನ ಸಂಗಡ ವ್ಯಾಜ್ಯವಾಡುವವರ ಸ್ವರವನ್ನು ಕೇಳು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 18

17ಮೂಡಣ ಗಾಳಿಯಿಂದಾದ ಹಾಗೆ ಅವರನ್ನು ಶತ್ರುವಿನ ಮುಂದೆ ಚದುರಿಸುವೆನು; ಅವರ ಆಪತ್ತಿನ ದಿನದಲ್ಲಿ ಅವರಿಗೆ ಮುಖವನ್ನಲ್ಲ, ಬೆನ್ನನ್ನು ತೋರಿಸುವೆನು.

18ಆಗ ಅವರು--ಬನ್ನಿರಿ, ಯೆರೆವಿಾಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ; ಯಾಜಕ ನಿಂದ ನ್ಯಾಯಪ್ರಮಾಣವೂ ಜ್ಞಾನಿಯಿಂದ ಆಲೋಚ ನೆಯೂ ಪ್ರವಾದಿಯಿಂದ ವಾಕ್ಯವೂ ತಪ್ಪುವುದಿಲ್ಲ ಬನ್ನಿರಿ, ನಾಲಿಗೆಯಿಂದ ಅವನನ್ನು ಹೊಡೆಯೋಣ, ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ ಎಂದು ಅವರು ಹೇಳಿದರು.

19ಓ ಕರ್ತನೇ, ನನ್ನನ್ನು ಆಲೈಸು; ನನ್ನ ಸಂಗಡ ವ್ಯಾಜ್ಯವಾಡುವವರ ಸ್ವರವನ್ನು ಕೇಳು.

20ಒಳ್ಳೇದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ? ಅವರು ನನ್ನ ಪ್ರಾಣಕ್ಕೆ ಕುಣಿಯನ್ನು ಅಗೆದಿದ್ದಾರೆ; ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವದಕ್ಕೂ ನಿನ್ನ ಉಗ್ರವನ್ನು ಅವರಿಂದ ತಿರುಗಿಸುವದಕ್ಕೂ ನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ.

21ಆದದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು; ಕತ್ತಿಯ ಬಲದಿಂದ ಅವರ ರಕ್ತವನ್ನು ಸುರಿದುಬಿಡು; ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ; ಅವರ ಗಂಡಸರು ಕೊಲ್ಲಲ್ಪಟ್ಟು ಸಾಯಲಿ; ಅವರ ಯೌವನಸ್ಥರು ಯುದ್ಧ ದಲ್ಲಿ ಕತ್ತಿಯಿಂದ ವಧಿಸಲ್ಪಡಲಿ.

ಯೆರೆಮಿಯ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी