ನ್ಯಾಯಸ್ಥಾಪಕರು 18:5

ಆಗ ಅವರು ಅವನಿಗೆ--ನಾವು ಹೋಗುವ ನಮ್ಮ ಮಾರ್ಗವು ಸಫಲವಾಗುವದೋ? ಎಂದು ತಿಳಿಯುವ ಹಾಗೆ ದಯಮಾಡಿ ದೇವರನ್ನು ಕೇಳು ಅಂದರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 18

3ಅವರು ವಿಾಕನ ಮನೆಯ ಬಳಿಯಲ್ಲಿರುವಾಗ ಲೇವಿಯನಾದ ಪ್ರಾಯಸ್ಥನ ಸ್ವರವನ್ನು ತಿಳುಕೊಂಡು ಅವನ ಬಳಿಗೆ ಹೋಗಿ--ನಿನ್ನನ್ನು ಇಲ್ಲಿಗೆ ಕರಕೊಂಡು ಬಂದವರು ಯಾರು? ಇಲ್ಲಿ ಏನು ಮಾಡುತ್ತಿ? ಇಲ್ಲಿ ನಿನಗೆ ಏನು ಇದೆ ಅಂದರು.

4ಅವನು ಅವರಿಗೆವಿಾಕನು ನನಗೆ ಹೀಗೆ ಹೀಗೆ ನಡಿಸುತ್ತಾನೆ; ನನ್ನನ್ನು ಸಂಬಳಕ್ಕೆ ಇಟ್ಟು ಕೊಂಡಿದ್ದಾನೆ; ನಾನು ಅವನಿಗೆ ಯಾಜಕನಾಗಿದ್ದೇನೆ ಅಂದನು.

5ಆಗ ಅವರು ಅವನಿಗೆ--ನಾವು ಹೋಗುವ ನಮ್ಮ ಮಾರ್ಗವು ಸಫಲವಾಗುವದೋ? ಎಂದು ತಿಳಿಯುವ ಹಾಗೆ ದಯಮಾಡಿ ದೇವರನ್ನು ಕೇಳು ಅಂದರು.

6ಆ ಯಾಜಕನು--ಸಮಾಧಾನವಾಗಿ ಹೋಗಿರಿ; ನೀವು ಹೋಗುವ ನಿಮ್ಮ ಮಾರ್ಗವು ಕರ್ತನ ಮುಂದೆ ಅದೆ ಅಂದನು.

7ಆಗ ಆ ಐದು ಮಂದಿಯು ಹೊರಟು ಲಯಿಷಿಗೆ ಹೋಗಿ ಅದರಲ್ಲಿ ವಾಸಿಸಿರುವ ಆ ಜನರನ್ನು ನೋಡು ವಾಗ ಅವರು ನಿಶ್ಚಿಂತರಾಗಿಯೂ ಚೀದೋನ್ಯರ ಹಾಗೆ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇದ್ದರು; ಯಾವ ಕಾರ್ಯದಲ್ಲಾದರೂ ನಾಚಿಕೆಪಡಿಸುವದಕ್ಕೆ ಬಿಗಿಹಿಡಿಯುವ ನ್ಯಾಯಾಧಿಪತಿಯು ದೇಶದಲ್ಲಿ ಇರ ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದರು; ಯಾವ ಮನುಷ್ಯನ ಸಂಗಡವೂ ಅವರಿಗೆ ಏನೂ ಕೆಲಸವಿರಲಿಲ್ಲ.

ನ್ಯಾಯಸ್ಥಾಪಕರು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी