ಯೆರೆಮಿಯ 11:11

ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವರು ತಪ್ಪಿಸಿಕೊಳ್ಳ ಲಾರದ ಕೇಡನ್ನು ಅವರ ಮೇಲೆ ತರುವೆನು; ಅವರು ನನ್ನನ್ನು ಕೂಗಿದರೂ ನಾನು ಅದನ್ನು ಕೇಳುವದಿಲ್ಲ,

ಸಂದರ್ಭದೊಂದಿಗೆ ಓದಿ · ಯೆರೆಮಿಯ 11

9ಇದಲ್ಲದೆ, ಕರ್ತನು ನನಗೆ ಹೇಳಿದ್ದೇನಂದರೆ-- ಯೆಹೂದದ ಮನುಷ್ಯರಲ್ಲಿಯೂ ಯೆರೂಸಲೇಮಿನ ನಿವಾಸಿಗಳಲ್ಲಿಯೂ ಒಳಸಂಚು ಕಂಡು ಬಂದಿದೆ.

10ನನ್ನ ಮಾತುಗಳನ್ನು ಕೇಳಲೊಲ್ಲದಿದ್ದ ತಮ್ಮ ಪಿತೃಗಳ ಅಕ್ರಮ ಗಳಿಗೆ ತಿರುಗಿಕೊಂಡಿದ್ದಾರೆ; ಬೇರೆ ದೇವರುಗಳನ್ನು ಸೇವಿಸುವದಕ್ಕೆ ಅವುಗಳ ಹಿಂದೆ ಹೋಗಿದ್ದಾರೆ; ನಾನು ಅವರ ತಂದೆಗಳ ಸಂಗಡ ಮಾಡಿದ ಒಡಂಬಡಿಕೆಯನ್ನು ಇಸ್ರಾಯೇಲಿನ ಮನೆತನದವರೂ ಯೆಹೂದದ ಮನೆ ತನದವರೂ ವಿಾರಿದ್ದಾರೆ.

11ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವರು ತಪ್ಪಿಸಿಕೊಳ್ಳ ಲಾರದ ಕೇಡನ್ನು ಅವರ ಮೇಲೆ ತರುವೆನು; ಅವರು ನನ್ನನ್ನು ಕೂಗಿದರೂ ನಾನು ಅದನ್ನು ಕೇಳುವದಿಲ್ಲ,

12ಆಗ ಯೆಹೂದದ ಪಟ್ಟಣಗಳೂ ಯೆರೂಸಲೇಮಿನ ನಿವಾಸಿಗಳೂ ಹೋಗಿ ತಾವು ಧೂಪವನ್ನರ್ಪಿಸುವ ದೇವರುಗಳಿಗೆ ಕೂಗುವರು; ಇವು ಅವರ ಕೇಡಿನ ಕಾಲದಲ್ಲಿ ಅವರನ್ನು ರಕ್ಷಿಸುವದೇ ಇಲ್ಲ.

13ಓ ಯೆಹೂದವೇ, ನಿನ್ನ ಪಟ್ಟಣಗಳಷ್ಟು ನಿನ್ನ ದೇವರುಗಳು ಇದ್ದವು; ಯೆರೂಸಲೇಮಿಗೆ ಎಷ್ಟು ಬೀದಿಗಳೋ ಅಷ್ಟು ಬಲಿಪೀಠಗಳನ್ನು ನಾಚಿಕೆಗೆ ಅಂದರೆ ಅಷ್ಟು ಬಲಿ ಪೀಠಗಳನ್ನು ಬಾಳನಿಗೆ ಧೂಪವನ್ನರ್ಪಿಸುವದಕ್ಕೆ ಇಟ್ಟಿ ದ್ದೀರಿ.

ಯೆರೆಮಿಯ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी