ಯೆಶಾಯ 26:13

ಓ ಕರ್ತನೇ, ನಮ್ಮ ದೇವರೇ, ನಿನ್ನ ಬದಲು ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು. ಆದರೆ ನಿನ್ನಿಂದ ಮಾತ್ರವೇ ನಿನ್ನ ನಾಮವನ್ನು ನಾವು ಜ್ಞಾಪಿಸಿ ಕೊಳ್ಳುವಂತಾಯಿತು.

ಸಂದರ್ಭದೊಂದಿಗೆ ಓದಿ · ಯೆಶಾಯ 26

11ಕರ್ತನೇ, ನಿನ್ನ ಕೈ ಎತ್ತಿರಲು ಅವರು ನೋಡುವದಿಲ್ಲ, ಆದರೆ ಅವರು ನೋಡಿ ನಿನ್ನ ಜನರಿಗೋಸ್ಕರ ಹೊಟ್ಟೆಕಿಚ್ಚು ಪಟ್ಟದ್ದಕ್ಕೆ ನಾಚಿಕೆ ಪಡುವರು. ಹೌದು, ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು.

12ಕರ್ತನೇ, ನಮಗೆ ಸಮಾಧಾನ ವನ್ನು ವಿಧಿಸುವಿ. ನೀನೇ ನಮ್ಮ ಕ್ರಿಯೆಗಳನ್ನೆಲ್ಲಾ ನಮಗೋಸ್ಕರ ನಡೆಸಿದ್ದೀ.

13ಓ ಕರ್ತನೇ, ನಮ್ಮ ದೇವರೇ, ನಿನ್ನ ಬದಲು ಬೇರೆ ಒಡೆಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದರು. ಆದರೆ ನಿನ್ನಿಂದ ಮಾತ್ರವೇ ನಿನ್ನ ನಾಮವನ್ನು ನಾವು ಜ್ಞಾಪಿಸಿ ಕೊಳ್ಳುವಂತಾಯಿತು.

14ಅವರು ಸತ್ತರು ಬದುಕುವ ದಿಲ್ಲ; ಆದ್ದರಿಂದ ನೀನು ಅವರನ್ನು ಸಂದರ್ಶಿಸಿ ನಾಶ ಮಾಡಿ ಅವರ ಎಲ್ಲಾ ಜ್ಞಾಪಕಗಳನ್ನು ಅಳಿಸಿಬಿಟ್ಟಿದ್ದೀ.

15ಜನಾಂಗವನ್ನು ಹೆಚ್ಚಿಸಿದ್ದೀ, ಓ ಕರ್ತನೇ, ಜನಾಂಗ ವನ್ನು ಹೆಚ್ಚಿಸಿದ್ದೀ, ನೀನು ಮಹಿಮೆ ಹೊಂದಿದ್ದೀ; ನೀನು ದೇಶದ ಮೇರೆಗಳನ್ನೆಲ್ಲಾ ಭೂಮಿಯ ಕಟ್ಟಕಡೆ ಯ ವರೆಗೂ ವಿಸ್ತರಿಸಿದ್ದೀ.

ಯೆಶಾಯ 26 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी