ನನ್ನ ಸೇವಕನಾದ ಮೋಶೆಯು ಹಾಗಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾ ಗಿದ್ದಾನೆ.
5ಕರ್ತನು ಮೇಘಸ್ತಂಭದಲ್ಲಿ ಇಳಿದು ಗುಡಾರದ ಬಾಗಿಲ ಬಳಿಯಲ್ಲಿ ನಿಂತು ಆರೋನನನ್ನೂ ಮಿರ್ಯಾಮ ಳನ್ನೂ ಕರೆದಾಗ ಅವರಿಬ್ಬರೂ ಮುಂದೆ ಬಂದರು.
6ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು.
7ನನ್ನ ಸೇವಕನಾದ ಮೋಶೆಯು ಹಾಗಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾ ಗಿದ್ದಾನೆ.
8ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
9ಕರ್ತನ ಕೋಪವು ಅವರ ಮೇಲೆ ಉರಿಯಿತು, ಆತನು ಹೋದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ