ಯೆಶಾಯ 55:3

ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.

ಸಂದರ್ಭದೊಂದಿಗೆ ಓದಿ · ಯೆಶಾಯ 55

1ಹಾ, ಬಾಯಾರಿದ ಸಕಲಜನರೇ, ನೀವು ನೀರಿನ ಬಳಿಗೆ ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ; ಹೌದು, ಬನ್ನಿರಿ; ಹಣವಿಲ್ಲದೆ ಮತ್ತು ಕ್ರಯವಿಲ್ಲದೆ ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡು ಕೊಳ್ಳಿರಿ.

2ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ!

3ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.

4ಇಗೋ ನಾನು ಅವನನ್ನು ಜನಗಳಿಗೆ ಸಾಕ್ಷಿಯನ್ನಾಗಿಯೂ ಅವರಿಗೆ ನಾಯಕನನ್ನಾಗಿಯೂ ಅಧಿಪತಿಯನ್ನಾ ಗಿಯೂ ಕೊಟ್ಟೆನು.

5ಇಗೋ, ನಿನ್ನ ದೇವರಾದ ಕರ್ತನ ನಿಮಿತ್ತವೂ ಇಸ್ರಾಯೇಲಿನ ಪರಿಶುದ್ಧನ ನಿಮಿತ್ತವೂ ನೀನು ತಿಳಿಯದ ಜನಾಂಗಗಳನ್ನು ಕರೆ ಯುವಿ; ಆತನು ನಿನ್ನನ್ನು ಮಹಿಮೆ ಪಡಿಸಿದ್ದರಿಂದ ನಿನ್ನನ್ನು ತಿಳಿಯದ ಜನಾಂಗಗಳು ನಿನ್ನ ಬಳಿಗೆ ಓಡಿ ಬರುವವು.

ಯೆಶಾಯ 55 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी