ರಕ್ತವನ್ನು ಮಾತ್ರ ತಿನ್ನದ ಹಾಗೆ ಜಾಗ್ರತೆ ಯಾಗಿರು; ಯಾಕಂದರೆ ರಕ್ತವು ಪ್ರಾಣವೇ, ಮತ್ತು ಪ್ರಾಣವನ್ನು ಮಾಂಸದ ಸಂಗಡ ತಿನ್ನಬೇಡ.
21ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ಆದುಕೊಂಡ ಸ್ಥಳವು ನಿನಗೆ ದೂರವಾದರೆ ಕರ್ತನು ನಿನಗೆ ಕೊಟ್ಟ ಪಶು ಕುರಿಗಳನ್ನು ನಾನು ನಿನಗೆ ಆಜ್ಞಾಪಿಸಿದಂತೆ ಕೊಯ್ದು ನಿನ್ನ ಬಾಗಲುಗಳಲ್ಲಿ ನಿನಗೆ ಮನಸ್ಸಿದ್ದಷ್ಟು ಉಣ್ಣಬಹುದು.
22ಆದರೆ ಜಿಂಕೆ ಕಡವೆಗಳನ್ನು ಉಣ್ಣುವ ಹಾಗೆ ಅದನ್ನು ಉಣ್ಣಬೇಕು. ಶುದ್ಧನೂ ಅಶುದ್ಧನೂ ಕೂಡ ಅದೇ ರೀತಿಯಲ್ಲಿ ಅದನ್ನು ತಿನ್ನಲಿ.
23ರಕ್ತವನ್ನು ಮಾತ್ರ ತಿನ್ನದ ಹಾಗೆ ಜಾಗ್ರತೆ ಯಾಗಿರು; ಯಾಕಂದರೆ ರಕ್ತವು ಪ್ರಾಣವೇ, ಮತ್ತು ಪ್ರಾಣವನ್ನು ಮಾಂಸದ ಸಂಗಡ ತಿನ್ನಬೇಡ.
24ಅದನ್ನು ತಿನ್ನದೆ ನೀರಿನಂತೆ ಭೂಮಿಯ ಮೇಲೆ ಹೊಯ್ಯಬೇಕು.
25ನೀನು ಕರ್ತನ ಮುಂದೆ ಸರಿಯಾದದ್ದನ್ನು ಮಾಡುವದರಿಂದ ನಿನಗೂ ನಿನ್ನ ಮುಂದಿರುವ ಮಕ್ಕಳಿಗೂ ಒಳ್ಳೇದಾಗುವ ಹಾಗೆ ಅದನ್ನು ತಿನ್ನಬೇಡ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ