ಯೆಶಾಯ 38:18

ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು.

ಸಂದರ್ಭದೊಂದಿಗೆ ಓದಿ · ಯೆಶಾಯ 38

16ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ.

17ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.

18ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು.

19ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು.

20ಕರ್ತನು ನನ್ನನ್ನು ರಕ್ಷಿಸಲು ಸಿದ್ಧನಾಗಿ ದ್ದನು; ಆದದರಿಂದ ಕರ್ತನ ಆಲಯದಲ್ಲಿ ನಮ್ಮ ಜೀವ ಮಾನದ ದಿವಸಗಳಲ್ಲೆಲ್ಲಾ ತಂತಿವಾದ್ಯಗಳಿಂದ ಹಾಡು ಗಳನ್ನು ನಾವು ಹಾಡುವೆವು.

ಯೆಶಾಯ 38 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी