೨ ಪೂರ್ವಕಾಲವೃತ್ತಾಂತ 33:12

ಅವನು ಬಾಧೆಯಲ್ಲಿರುವಾಗ ತನ್ನ ದೇವ ರಾದ ಕರ್ತನನ್ನು ಬೇಡಿಕೊಂಡದ್ದಲ್ಲದೆ ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನಿಗೆ ಪ್ರಾರ್ಥನೆ ಮಾಡಿದನು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 33

10ಕರ್ತನು ಮನಸ್ಸೆಯೊಂದಿಗೂ ಅವನ ಜನ ರೊಂದಿಗೂ ಮಾತನಾಡಿದನು; ಆದರೆ ಅವರು ಆಲೈ ಸದೆ ಹೋದರು.

11ಆದಕಾರಣ ಕರ್ತನು ಅಶ್ಶೂರದ ಅರಸನ ಸೈನ್ಯದ ಅಧಿಪತಿಗಳನ್ನು ಬರಮಾಡಿದನು. ಅವರು ಮನಸ್ಸೆಯನ್ನು ಮುಳ್ಳುಗಿಡಗಳಲ್ಲಿ ಹಿಡಿದು ಅವನಿಗೆ ಸಂಕೋಲೆಗಳನ್ನು ಹಾಕಿ ಅವನನ್ನು ಬಾಬೆಲಿಗೆ ಒಯ್ದರು.

12ಅವನು ಬಾಧೆಯಲ್ಲಿರುವಾಗ ತನ್ನ ದೇವ ರಾದ ಕರ್ತನನ್ನು ಬೇಡಿಕೊಂಡದ್ದಲ್ಲದೆ ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನಿಗೆ ಪ್ರಾರ್ಥನೆ ಮಾಡಿದನು.

13ಆಗ ಆತನು ಕನಿಕರಪಟ್ಟು ಅವನ ಬಿನ್ನಹವನ್ನು ಕೇಳಿ ಯೆರೂಸ ಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರಿಗಿ ಬರಮಾಡಿ ದನು. ಆಗ ಕರ್ತನೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.

14ಇದಾದ ತರುವಾಯ ಮನಸ್ಸೆಯು ದಾವೀದನ ಪಟ್ಟಣದ ಹೊರಭಾಗದಲ್ಲಿ ಗೀಹೋನಿನ ಪಶ್ಚಿಮ ಕಡೆಯ ತಗ್ಗಿನಲ್ಲಿ ವಿಾನುಬಾಗಲ ದ್ವಾರದ ವರೆಗೆ ಓಫೆಲ್‌ ಸುತ್ತಲೂ ಗೋಡೆಯನ್ನು ಕಟ್ಟಿಸಿ ಅದನ್ನು ಬಹಳ ಎತ್ತರ ಮಾಡಿ ಯೆಹೂದದ ಸಮಸ್ತ ಕೋಟೆ ಯುಳ್ಳ ಪಟ್ಟಣಗಳಲ್ಲಿ ಸೈನ್ಯದ ಅಧಿಪತಿಗಳನ್ನು ಇಟ್ಟನು.

೨ ಪೂರ್ವಕಾಲವೃತ್ತಾಂತ 33 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी