ಅಪೊಸ್ತಲರ ಕೃತ್ಯಗಳು 2:24

ದೇವರು ಆತನನ್ನು ಮರಣ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು. ಯಾಕಂದರೆ ಮರಣವು ಆತನನ್ನು ಹಿಡಿದುಕೊಂಡಿರುವದು ಅಸಾಧ್ಯ ವಾಗಿತ್ತು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 2

22ಇಸ್ರಾಯೇಲ್‌ ಜನರೇ, ಈ ಮಾತುಗಳನ್ನು ಕೇಳಿರಿ; ನಿಮಗೂ ತಿಳಿದಿರುವಂತೆ ನಜರೇತಿನ ಯೇಸುವು ದೇವರಿಗೆ ಮೆಚ್ಚಿಕೆಯಾದ ನೆಂಬದಕ್ಕೆ ದೇವರು ಆತನಿಂದ ಮಹತ್ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯ ಗಳನ್ನೂ ನಿಮ್ಮ ಮಧ್ಯದಲ್ಲಿ ನಡಿಸಿದನು.

23ಆದರೆ ದೇವರ ಸ್ಥಿರಸಂಕಲ್ಪಕ್ಕನುಸಾರವಾಗಿಯೂ ಭವಿಷ್ಯದ್‌ ಜ್ಞಾನಕ್ಕನುಸಾರವಾಗಿಯೂ ಆತನು ಒಪ್ಪಿಸಲ್ಪಟ್ಟಾಗ ನೀವು ಆತನನ್ನು ಹಿಡಿದು ದುಷ್ಟರ ಕೈಗಳಿಂದ ಶಿಲುಬೆಗೆ ಹಾಕಿಸಿಕೊಂದಿರಿ.

24ದೇವರು ಆತನನ್ನು ಮರಣ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು. ಯಾಕಂದರೆ ಮರಣವು ಆತನನ್ನು ಹಿಡಿದುಕೊಂಡಿರುವದು ಅಸಾಧ್ಯ ವಾಗಿತ್ತು.

25ದಾವೀದನು ಆತನ ವಿಷಯವಾಗಿ-- ನಾನು ಕರ್ತನನ್ನು ನನ್ನ ಎದುರಿನಲ್ಲಿ ಯಾವಾಗಲೂ ನೋಡುತ್ತಿದ್ದೆನು; ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೇ ಇದ್ದಾನೆ.

26ಆದದರಿಂದ ನನ್ನ ಹೃದಯವು ಹರ್ಷಿಸಿತು, ನನ್ನ ನಾಲಿಗೆಯು ಉಲ್ಲಾಸ ಗೊಂಡಿತು; ಇದಲ್ಲದೆ ನನ್ನ ಶರೀರವು ಸಹ ನಿರೀಕ್ಷೆಯಲ್ಲಿ ನೆಲೆಯಾಗಿರುವದು;

ಅಪೊಸ್ತಲರ ಕೃತ್ಯಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी