ಪರಮ ಗೀತ 5:6

ನಾನು ನನ್ನ ಪ್ರಿಯನಿಗೆ ಕದತೆರೆದೆನು; ಆದರೆ ನನ್ನ ಪ್ರಿಯನು ಹಿಂದಿರುಗಿ ಹೋಗಿದ್ದನು. ಅವನು ಮಾತನಾಡಿದಾಗ ನನ್ನ ಪ್ರಾಣವು ಸತ್ತಂತಿತ್ತು; ಅವನನ್ನು ಹುಡುಕಿದೆನು; ಸಿಕ್ಕದೆ ಹೋದನು; ಅವನನ್ನು ಕರೆದೆನು; ಪ್ರತ್ಯುತ್ತರ ಕೊಡದೆ ಹೋದನು.

ಸಂದರ್ಭದೊಂದಿಗೆ ಓದಿ · ಪರಮ ಗೀತ 5

4ನನ್ನ ಪ್ರಿಯನು ಬಾಗಲ ಸಂದಿನಲ್ಲಿ ತನ್ನ ಕೈಹಾಕಿದನು; ನನ್ನ ಕರುಳುಗಳು ಅವನಿಗಾಗಿ ಮರುಗಿದವು.

5ನಾನು ನನ್ನ ಪ್ರಿಯನಿಗೆ ತೆರೆಯಲು ಎದ್ದಾಗ ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವೂ ನನ್ನ ಬೆರಳುಗಳಿಂದ ಸೋರುವ ಬೋಳವೂ ಸುರಿಯಿತು.

6ನಾನು ನನ್ನ ಪ್ರಿಯನಿಗೆ ಕದತೆರೆದೆನು; ಆದರೆ ನನ್ನ ಪ್ರಿಯನು ಹಿಂದಿರುಗಿ ಹೋಗಿದ್ದನು. ಅವನು ಮಾತನಾಡಿದಾಗ ನನ್ನ ಪ್ರಾಣವು ಸತ್ತಂತಿತ್ತು; ಅವನನ್ನು ಹುಡುಕಿದೆನು; ಸಿಕ್ಕದೆ ಹೋದನು; ಅವನನ್ನು ಕರೆದೆನು; ಪ್ರತ್ಯುತ್ತರ ಕೊಡದೆ ಹೋದನು.

7ಪಟ್ಟಣದಲ್ಲಿ ಸಂಚರಿಸುವ ಕಾವಲುಗಾರರು ನನ್ನನ್ನು ಕಂಡು, ನನ್ನನ್ನು ಹೊಡೆದು, ಗಾಯಮಾಡಿದರು; ಗೋಡೆಗಳನ್ನು ಕಾಯುವವರು ನನ್ನ ಮುಸುಕನ್ನು ಕಸಕೊಂಡರು.

8ನಿಮಗೆ ಆಣೆ ಇಡುತ್ತೇನೆ, ಓ ಯೆರೂಸಲೇಮಿನ ಕುಮಾರ್ತೆ ಯರೇ--ನೀವು ನನ್ನ ಪ್ರಿಯನನ್ನು ಕಂಡರೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ಅವನಿಗೆ ತಿಳಿಸಿರಿ.

ಪರಮ ಗೀತ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी