೨ ಅರಸುಗಳು 10:31

ಆದರೆ ಯೇಹುವು ತನ್ನ ಪೂರ್ಣಹೃದಯ ದಿಂದ ಇಸ್ರಾಯೇಲಿನ ದೇವರಾದ ಕರ್ತನ ನ್ಯಾಯ ಪ್ರಮಾಣದಲ್ಲಿ ನಡೆಯುವ ಹಾಗೆ ಎಚ್ಚರಿಕೆಯಾಗಿರ ಲಿಲ್ಲ; ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿ ಸಿದ ಯಾರೊಬ್ಬಾಮನ ಪಾಪಗಳನ್ನು ತೊರೆದು ಬಿಡಲಿಲ್ಲ.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 10

29ಆದರೆ ಬೇತೇಲ್‌, ದಾನ್‌ನಲ್ಲಿಯೂ ಇರುವ ಬಂಗಾರದ ಹೋರಿಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ.

30ಕರ್ತನು ಯೇಹು ವಿಗೆ--ನೀನು ನನ್ನ ದೃಷ್ಟಿಗೆ ಸರಿಯಾದದ್ದನ್ನು ನಡಿಸಿ ನನ್ನ ಹೃದಯದಲ್ಲಿದ್ದ ಎಲ್ಲಾದರ ಪ್ರಕಾರ ಅಹಾಬನ ಮನೆಗೆ ಮಾಡಿ ಯುಕ್ತವಾದದ್ದನ್ನು ಮಾಡಿದ್ದರಿಂದ ನಿನ್ನ ಮಕ್ಕಳು ನಾಲ್ಕು ವಂಶಗಳ ವರೆಗೂ ಇಸ್ರಾಯೇ ಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು ಅಂದನು.

31ಆದರೆ ಯೇಹುವು ತನ್ನ ಪೂರ್ಣಹೃದಯ ದಿಂದ ಇಸ್ರಾಯೇಲಿನ ದೇವರಾದ ಕರ್ತನ ನ್ಯಾಯ ಪ್ರಮಾಣದಲ್ಲಿ ನಡೆಯುವ ಹಾಗೆ ಎಚ್ಚರಿಕೆಯಾಗಿರ ಲಿಲ್ಲ; ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿ ಸಿದ ಯಾರೊಬ್ಬಾಮನ ಪಾಪಗಳನ್ನು ತೊರೆದು ಬಿಡಲಿಲ್ಲ.

32ಆ ದಿವಸಗಳಲ್ಲಿ ಕರ್ತನು ಇಸ್ರಾಯೇಲನ್ನು ಕಡಿಮೆ ಮಾಡಲು ಆರಂಭಿಸಿದನು. ಯಾಕಂದರೆ ಹಜಾಯೇ ಲನು ಇಸ್ರಾಯೇಲಿನ ಎಲ್ಲಾ ಮೇರೆಗಳಲ್ಲಿ ಅವರನ್ನು ಸಂಹರಿಸಿದನು.

33ಮೂಡಣದಲ್ಲಿ ಯೊರ್ದನ್‌ ಮೊದಲುಗೊಂಡು ಗಾದ್ಯರೂ ರೂಬೆನ್ಯರೂ ವಾಸ ವಾಗಿದ್ದ ಗಿಲ್ಯಾದಿನ ಎಲ್ಲಾ ದೇಶವನ್ನೂ ಅರ್ನೋನ್‌ ನದಿಯ ಬಳಿಯಲ್ಲಿರುವ ಅರೋಯೇರ್‌ ಮೊದಲು ಗೊಂಡು ಮನಸ್ಸೆಯವರು ನಿವಾಸವಾಗಿದ್ದ ಗಿಲ್ಯಾದ್‌ ಬಾಶಾನ್‌ ಸಂಹರಿಸಿದನು.

೨ ಅರಸುಗಳು 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी