ಯೆರೆಮಿಯ 13:20

ನಿಮ್ಮ ಕಣ್ಣುಗಳನ್ನು ಎತ್ತಿ ಉತ್ತರದಿಂದ ಬರುವವ ರನ್ನು ನೋಡಿರಿ; ನಿನಗೆ ಕೊಡಲ್ಪಟ್ಟ ಹಿಂಡೂ ನನ್ನ ಶೃಂಗಾರದ ಮಂದೆಯೂ ಎಲ್ಲಿ?

ಸಂದರ್ಭದೊಂದಿಗೆ ಓದಿ · ಯೆರೆಮಿಯ 13

18ಅರಸನಿಗೂ ರಾಣಿಗೂ ನೀನು ಹೇಳತಕ್ಕದ್ದೇ ನಂದರೆ--ನೀವು ತಗ್ಗಿಸಿಕೊಂಡು ಕೂತುಕೊಳ್ಳಿರಿ; ನಿಮ್ಮ ದೊರೆತನಗಳು ಅಂದರೆ ನಿಮ್ಮ ಗೌರವದ ಕಿರೀಟವು ಕೆಳಗೆ ಬರುವದು.

19ದಕ್ಷಿಣದ ಪಟ್ಟಣಗಳು ತೆರೆಯುವ ವನಿಲ್ಲದೆ ಮುಚ್ಚಲ್ಪಡುವವು, ಯೆಹೂದವೆಲ್ಲವೂ ಸಂಪೂರ್ಣವಾಗಿ ಸೆರೆಯಾಗಿ ಒಯ್ಯಲ್ಪಡುವದು.

20ನಿಮ್ಮ ಕಣ್ಣುಗಳನ್ನು ಎತ್ತಿ ಉತ್ತರದಿಂದ ಬರುವವ ರನ್ನು ನೋಡಿರಿ; ನಿನಗೆ ಕೊಡಲ್ಪಟ್ಟ ಹಿಂಡೂ ನನ್ನ ಶೃಂಗಾರದ ಮಂದೆಯೂ ಎಲ್ಲಿ?

21ಆತನು ನಿನ್ನನ್ನು ಶಿಕ್ಷಿಸುವಾಗ ಏನು ಹೇಳುವಿ? ನಿನ್ನ ಮೇಲೆ ಅವರು ಮುಖ್ಯ ಪ್ರಭುಗಳೂ ಮುಖ್ಯಸ್ಥರೂ ಆಗಿರುವದಕ್ಕೆ ನೀನೇ ಅವರಿಗೆ ಕಲಿಸಿದಿಯಲ್ಲಾ? ಹೆರುವ ಸ್ತ್ರೀಯ ಪ್ರಕಾರ ನಿನ್ನನ್ನು ದುಃಖಗಳು ಹಿಡಿಯುವವಲ್ಲವೋ?

22ಇವು ನನಗೆ ಯಾಕೆ ಸಂಭವಿಸಿದವೆಂದು ನೀನು ನಿನ್ನ ಹೃದಯದಲ್ಲಿ ಅಂದುಕೊಂಡರೆ, ಬಹಳವಾದ ನಿನ್ನ ಅಕ್ರಮದ ನಿಮಿತ್ತ ನಿನ್ನ ಬಟ್ಟೆಗಳು ತೆಗೆಯಲ್ಪಟ್ಟು ನಿನ್ನ ಹಿಮ್ಮಡಿಗಳು ಬೆತ್ತಲೆಯಾದವು.

ಯೆರೆಮಿಯ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी