ಜೆಕರ್ಯ 9:3

ತೂರ್‌ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.

ಸಂದರ್ಭದೊಂದಿಗೆ ಓದಿ · ಜೆಕರ್ಯ 9

1ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು.

2ಹಮಾತು ಬಹಳ ಜ್ಞಾನವಿರುವ ತೂರ್‌ ಚೀದೋನ್‌ ಸಹ ಅದರ ಮೇರೆಯಾಗಿದೆ.

3ತೂರ್‌ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.

4ಇಗೋ, ಕರ್ತನು ಅದನ್ನು ಹೊರಗೆ ಹಾಕುವನು; ಸಮುದ್ರದಲ್ಲಿ ಅದರ ಬಲವನ್ನು ಹೊಡೆಯುವನು; ಅದು ಬೆಂಕಿ ಯಿಂದ ದಹಿಸಲ್ಪಡುವದು.

5ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು.

ಜೆಕರ್ಯ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी