ತೀತನಿಗೆ 1:4

ನಮ್ಮಲ್ಲಿ ಹುದುವಾಗಿರುವ ನಂಬಿಕೆ ಗನುಸಾರವಾಗಿ ನನ್ನ ನಿಜಕುಮಾರನಾದ ತೀತನಿಗೆ-- ತಂದೆಯಾದ ದೇವರಿಂದಲೂ ನಮ್ಮ ರಕ್ಷಕನೂ ಕರ್ತನೂ ಆಗಿರುವ ಯೇಸು ಕ್ರಿಸ್ತನಿಂದಲೂ ನಿನಗೆ ಕೃಪೆಯೂ ಕನಿಕರವೂ ಶಾಂತಿಯೂ ಆಗಲಿ.

ಸಂದರ್ಭದೊಂದಿಗೆ ಓದಿ · ತೀತನಿಗೆ 1

2ಸುಳ್ಳಾಡದ ದೇವರು ಲೋಕದಾರಂಭಕ್ಕೆ ಮೊದಲೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು

3ತನ್ನ ವಾಕ್ಯ ಸಾರೋಣದ ಮೂಲಕ ತಕ್ಕ ಕಾಲದಲ್ಲಿ ಪ್ರಕಟಿಸಿ ನಮ್ಮ ರಕ್ಷಕನಾದ ದೇವರ ಆಜ್ಞೆಗನುಸಾರ ಆ ಸಾರೋಣ ವನ್ನು ಒಪ್ಪಿಸಿದನು.

4ನಮ್ಮಲ್ಲಿ ಹುದುವಾಗಿರುವ ನಂಬಿಕೆ ಗನುಸಾರವಾಗಿ ನನ್ನ ನಿಜಕುಮಾರನಾದ ತೀತನಿಗೆ-- ತಂದೆಯಾದ ದೇವರಿಂದಲೂ ನಮ್ಮ ರಕ್ಷಕನೂ ಕರ್ತನೂ ಆಗಿರುವ ಯೇಸು ಕ್ರಿಸ್ತನಿಂದಲೂ ನಿನಗೆ ಕೃಪೆಯೂ ಕನಿಕರವೂ ಶಾಂತಿಯೂ ಆಗಲಿ.

5ಈ ಕಾರಣದಿಂದ ಕ್ರೇತದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವವುಗಳನ್ನು ನೀನು ಕ್ರಮಪಡಿಸಿ ನಾನು ನಿನಗೆ ನೇಮಿಸಿದ ಪ್ರಕಾರ ಪ್ರತಿಯೊಂದು ಪಟ್ಟಣ ದಲ್ಲಿ (ಸಭೆಯ) ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆನು.

6ಸಭೆಯ ಹಿರಿಯನು ನಿಂದಾ ರಹಿತನೂ ಏಕಪತ್ನಿಯುಳ್ಳವನೂ ಆಗಿರಬೇಕು. ಅವನ ಮಕ್ಕಳು ನಂಬಿಗಸ್ತರಾಗಿರಬೇಕು; ಅವರು ದುರ್ಮಾರ್ಗ ಸ್ತರೆನಿಸಿ ಕೊಂಡವರಾಗಲಿ ಅಧಿಕಾರಕ್ಕೆ ಒಳಗಾಗದವ ರಾಗಲಿ ಆಗಿರಬಾರದು.

ತೀತನಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी