ಆಗ ಬೂಜ್ನಾದ ಬರಕೇಲನ ಮಗನಾದ ಎಲೀಹು ಉತ್ತರಕೊಟ್ಟು ಹೇಳಿದ್ದೇನೆಂದರೆ--ನಾನು ಒಳ್ಳೇಪ್ರಾಯದವನು, ನೀವು ನೆರೆಯವರು; ಆದದ ರಿಂದ ನಾನು ಹೆದರಿ ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವದಕ್ಕೆ ಭಯಪಟ್ಟೆನು.
4ಆಗ ಎಲೀಹುಯೋ ಬನ ಮಾತುಗಳು ಮುಗಿಯುವ ವರೆಗೂ ಕಾದು ಕೊಂಡನು;
5ಅವರು ತನಗಿಂತ ಹಿರಿಯರಾಗಿದ್ದರು. ಆ ಮೂವರ ಬಾಯಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ ಅವನ ಕೋಪ ಉರಿಯಿತು.
6ಆಗ ಬೂಜ್ನಾದ ಬರಕೇಲನ ಮಗನಾದ ಎಲೀಹು ಉತ್ತರಕೊಟ್ಟು ಹೇಳಿದ್ದೇನೆಂದರೆ--ನಾನು ಒಳ್ಳೇಪ್ರಾಯದವನು, ನೀವು ನೆರೆಯವರು; ಆದದ ರಿಂದ ನಾನು ಹೆದರಿ ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವದಕ್ಕೆ ಭಯಪಟ್ಟೆನು.
7ದಿನ ಗತಿಸಿದವರು ಮಾತನಾಡಲಿ, ಬಹಳ ವರುಷದವರು ಜ್ಞಾನವನ್ನು ಬೋಧಿಸಲಿ ಅಂದೆನು.
8ಆದರೆ ಮನುಷ್ಯನಲ್ಲಿ ಆತ್ಮ ಉಂಟು; ಸರ್ವಶಕ್ತನ ಶ್ವಾಸವು ಅವನಿಗೆ ಗ್ರಹಿಕೆ ಕೊಡುತ್ತದೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ