ಅರಣ್ಯಕಾಂಡ 24:11

ಈಗ ನಿನ್ನ ಸ್ಥಳಕ್ಕೆ ಓಡಿಹೋಗು; ನಾನು ನಿನ್ನನ್ನು ಬಹು ಘನಪಡಿಸ ಬೇಕೆಂದು ಅಂದುಕೊಂಡೆನು; ಆದರೆ ಇಗೋ, ಕರ್ತನು ನಿನಗೆ ಘನಬಾರದಂತೆ ತಡೆದಿದ್ದಾನೆ ಅಂದನು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 24

9ಅವನು ಸಿಂಹದ ಹಾಗೆಯೂ ದೊಡ್ಡ ಸಿಂಹದ ಹಾಗೆಯೂ ಬಾಗಿ ಮಲಗುತ್ತಾನೆ; ಅವನನ್ನು ಎಬ್ಬಿಸುವವರು ಯಾರು? ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದ, ನಿನ್ನನ್ನು ಶಪಿಸುವವರಿಗೆ ಶಾಪ ಉಂಟು.

10ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆ ಹೊಡೆದು ಅವನಿಗೆ--ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆದೆನು; ಆದರೆ ಇಗೋ, ನೀನು ಈ ಮೂರುಸಾರಿ ಆಶೀರ್ವದಿಸೇ ಆಶೀರ್ವದಿಸಿದಿ.

11ಈಗ ನಿನ್ನ ಸ್ಥಳಕ್ಕೆ ಓಡಿಹೋಗು; ನಾನು ನಿನ್ನನ್ನು ಬಹು ಘನಪಡಿಸ ಬೇಕೆಂದು ಅಂದುಕೊಂಡೆನು; ಆದರೆ ಇಗೋ, ಕರ್ತನು ನಿನಗೆ ಘನಬಾರದಂತೆ ತಡೆದಿದ್ದಾನೆ ಅಂದನು.

12ಬಿಳಾಮನು ಬಾಲಾಕನಿಗೆ--ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ--

13ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿ ಬಂಗಾರಗಳನ್ನು ಕೊಟ್ಟರೂ ನನ್ನ ಹೃದಯದಿಂದ ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡುವದಕ್ಕೆ ಕರ್ತನ ಆಜ್ಞೆಯನ್ನು ವಿಾರಲಾರೆನು; ಕರ್ತನು ಏನು ಹೇಳುತ್ತಾನೋ ಅದನ್ನು ಹೇಳುವೆನೆಂದು ನಾನು ಹೇಳಲಿಲ್ಲವೋ? ಇಗೋ, ನನ್ನ ಜನರ ಬಳಿಗೆ ಹೋಗುತ್ತೇನೆ;

ಅರಣ್ಯಕಾಂಡ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी