ಆದಿಕಾಂಡ 16:5

ಆಗ ಸಾರಯಳು ಅಬ್ರಾಮನಿಗೆ--ನನಗೆ ಆದ ಅನ್ಯಾಯವು ನಿನ್ನ ಮೇಲೆ ಇರಲಿ. ನಾನು ನನ್ನ ದಾಸಿಯನ್ನು ನಿನ್ನ ಮಗ್ಗುಲಿಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರವಾದೆನು. ದೇವರು ನಿನಗೂ ನನಗೂ ನ್ಯಾಯತೀರಿಸಲಿ ಅಂದಳು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 16

3ಅಬ್ರಾಮನು ಕಾನಾನ್‌ದೇಶದಲ್ಲಿ ಹತ್ತು ವರುಷ ವಾಸಿಸಿದ ತರುವಾಯ ಅಬ್ರಾಮನ ಹೆಂಡತಿಯಾದ ಸಾರಯಳು ಐಗುಪ್ತದ ತನ್ನ ದಾಸಿಯಾದ ಹಾಗರಳನ್ನು ತನ್ನ ಗಂಡನಾದ ಅಬ್ರಾಮನಿಗೆ ಹೆಂಡತಿಯಾಗಿರುವದಕ್ಕೆ ಕೊಟ್ಟಳು.

4ಅವನು ಹಾಗರಳನ್ನು ಕೂಡಿದಾಗ ಗರ್ಭಿಣಿ ಯಾದಳು. ತಾನು ಗರ್ಭಿಣಿಯಾದೆನೆಂದು ತಿಳಿದಾಗ ಅವಳ ಯಜಮಾನಿಯು ಅವಳ ದೃಷ್ಟಿಯಲ್ಲಿ ತಿರಸ್ಕರಿಸ ಲ್ಪಟ್ಟಳು.

5ಆಗ ಸಾರಯಳು ಅಬ್ರಾಮನಿಗೆ--ನನಗೆ ಆದ ಅನ್ಯಾಯವು ನಿನ್ನ ಮೇಲೆ ಇರಲಿ. ನಾನು ನನ್ನ ದಾಸಿಯನ್ನು ನಿನ್ನ ಮಗ್ಗುಲಿಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರವಾದೆನು. ದೇವರು ನಿನಗೂ ನನಗೂ ನ್ಯಾಯತೀರಿಸಲಿ ಅಂದಳು.

6ಆಗ ಅಬ್ರಾಮನು ಸಾರಯಳಿಗೆ--ಇಗೋ, ನಿನ್ನ ದಾಸಿಯು ನಿನ್ನ ಕೈಯಲ್ಲಿ ಇದ್ದಾಳೆ; ನೀನು ಮೆಚ್ಚುವದನ್ನು ಮಾಡು ಅಂದನು. ಆಗ ಸಾರಯಳು ಅವಳನ್ನು ಬಾಧಿಸಿದ್ದರಿಂದ ಅವಳು ಸಾರಯಳ ಬಳಿಯಿಂದ ಓಡಿಹೋದಳು.

7ಆಗ ಕರ್ತನ ದೂತನು ಅರಣ್ಯದಲ್ಲಿ ಶೂರಿನ ಮಾರ್ಗದಲ್ಲಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಅವಳನ್ನು ಕಂಡು

ಆದಿಕಾಂಡ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी